ವೆನಿಜುವೆಲಾದ ಮರಿಯಾ ಕೊರಿನಾ ಮಚಾದೊಗೆ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ

ಮರಿಯಾ ಕೊರಿನಾ ಮಚಾದೊ (Photo: X/@MariaCorinaYA)
ಟ್ರಂಪ್ ನೊಬೆಲ್ ಕನಸು ಭಗ್ನ
ಹೊಸದಿಲ್ಲಿ : 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದ್ದು, ಮರಿಯಾ ಕೊರಿನಾ ಮಚಾದೊ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೆನೆಜುವೆಲಾದ ಜನರ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಮತ್ತು ಶಾಂತಿಗಾಗಿ ನಡೆಸಿದ ಹೋರಾಟಕ್ಕಾಗಿ ಮರಿಯಾ ಕೊರಿನಾ ಮಚಾದೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ನಾರ್ವೆಯ ನೊಬೆಲ್ ಸಮಿತಿಯು ತಿಳಿಸಿದೆ.
ಮರಿಯಾ ಕೊರಿನಾ ವೆನೆಜುವೆಲಾದ ವಿಪಕ್ಷ ನಾಯಕಿ ಕೂಡ ಆಗಿದ್ದಾರೆ.
2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ 244 ವ್ಯಕ್ತಿಗಳ ಹೆಸರು ನಾಮಿನೇಟ್ ಆಗಿದ್ದರೆ, 94 ಸಂಘಟನೆಗಳ ಹೆಸರು ಸೇರಿ 338 ಹೆಸರುಗಳನ್ನು ಪಟ್ಟಿ ಮಾಡಲಾಗಿತ್ತು.
Next Story







