ಖತರ್ ರಾಜಧಾನಿ ದೋಹಾದಲ್ಲಿ ಭಾರೀ ಸರಣಿ ಸ್ಫೋಟ: ವರದಿ

ಸಾಂದರ್ಭಿಕ ಚಿತ್ರ : Photo Credit : PTI
ದೋಹಾ: ಖತರ್ ರಾಜಧಾನಿ ದೋಹಾದಲ್ಲಿ ಮಧ್ಯರಾತ್ರಿ ಬಳಿಕ ಸರಣಿ ಭಾರೀ ಸ್ಫೋಟಗಳು ಸಂಭವಿಸಿವೆ ಎಂದು Aljazeera ವರದಿ ಮಾಡಿದೆ.
ಸ್ಥಳೀಯ ಸಮಯದಂತೆ (22:40 GMT) ಬೆಳಗಿನ ಜಾವ ಸುಮಾರು 1:40 ಗಂಟೆಯ ವೇಳೆಗೆ ನಗರದಲ್ಲಿ ಕನಿಷ್ಠ ಐದು ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಸ್ಫೋಟಗಳಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿ ಸಂಭವಿಸಿರುವ ವರದಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ತಕ್ಷಣ ಕಾರ್ಯಾಚರಣೆ ಕೈಗೊಂಡು ಪ್ರಮುಖ ಪ್ರದೇಶಗಳಲ್ಲಿ ನಿಗಾವಣೆ ಹೆಚ್ಚಿಸಿವೆ.
ಇದಕ್ಕೂ ಮೊದಲು ಸೋಮವಾರ, ಇರಾನಿನ ಡ್ರೋನ್ ಗಳು ಖತರ್ ನ ಎರಡು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮೆಸಯೀದ್ ಕೈಗಾರಿಕಾ ನಗರದಲ್ಲಿರುವ ವಿದ್ಯುತ್ ಸ್ಥಾವರ ಮತ್ತು ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದಕ ಸಂಸ್ಥೆಯಾದ ಖತರ್ ಎನರ್ಜಿಗೆ ಸೇರಿದ ರಾಸ್ ಲಫಾನ್ ನ ಇಂಧನ ಸೌಲಭ್ಯಗಳು ದಾಳಿಗೆ ಒಳಗಾಗಿವೆ ಎಂದು ತಿಳಿದುಬಂದಿದೆ.
ಯಾವುದೇ ಸಾವುನೋವುಗಳ ವರದಿ ಇಲ್ಲದಿದ್ದರೂ, ಭದ್ರತಾ ಕಾರಣಗಳಿಂದಾಗಿ ಖತರ್ ಎನರ್ಜಿಯು ದಾಳಿ ನಡೆದ ಪ್ರದೇಶಗಳಲ್ಲಿ LNG ಹಾಗೂ ಇತರ ಉತ್ಪನ್ನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.






