ಮೆಕ್ಸಿಕೋ| ಹಳಿತಪ್ಪಿದ ಅಂತರ್ ಸಾಗರ ರೈಲು; 13 ಮಂದಿ ಮೃತ್ಯು

ಮೆಕ್ಸಿಕೋ ಸಿಟಿ, ಡಿ.29: ಮೆಕ್ಸಿಕೋದ ದಕ್ಷಿಣದ ರಾಜ್ಯ ಒಕ್ಸಾಕದಲ್ಲಿ ಅಂತರ್ ಸಾಗರ ರೈಲೊಂದು ಹಳಿತಪ್ಪಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ನಿಝಾಂಡಾ ನಗರದ ಬಳಿ ರೈಲು ಹಳಿತಪ್ಪಿದ್ದು ರೈಲಿನಲ್ಲಿ 241 ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿದ್ದರು. ಅಪಘಾತದಿಂದ ಪೆಸಿಫಿಕ್ ಸಾಗರವನ್ನು ಮೆಕ್ಸಿಕೋ ಕೊಲ್ಲಿಗೆ ಸಂಪರ್ಕಿಸುವ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ
Next Story





