ಮೆಕ್ಸಿಕೋದ ಫಾತಿಮಾ ಬಾಷ್ ʼವಿಶ್ವ ಸುಂದರಿʼ

ಫಾತಿಮಾ ಬಾಷ್ | Photo Credit : instagram.com \ fatimaboschfdz
ಬ್ಯಾಂಕಾಕ್, ನ.21: ಥೈಲ್ಯಾಂಡ್ ನಲ್ಲಿ ನಡೆದ 2025ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವದಾದ್ಯಂತದ 120ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಯಲ್ಲಿದ್ದು ಇವರಲ್ಲಿ ಮೆಕ್ಸಿಕೋ, ಐವರಿ ಕೋಸ್ಟ್, ಫಿಲಿಪ್ಪೀನ್ಸ್, ಥೈಲ್ಯಾಂಡ್ ಮತ್ತು ವೆನೆಝುವೆಲಾದ ಸ್ಪರ್ಧಿಗಳು ಅಂತಿಮ ಹಂತಕ್ಕೆ ಅರ್ಹತೆ ಪಡೆದಿದ್ದರು. ಭಾರತದ ಮಣಿಕಾ ವಿಶ್ವಕರ್ಮ ಟಾಪ್ 12ರ ಹಂತದಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದರು.
Next Story





