ಪಾಕಿಸ್ತಾನ | ಕರಾಚಿ ಕಚೇರಿ ಮುಚ್ಚಿದ ಮೈಕ್ರೋಸಾಫ್ಟ್ ಸಂಸ್ಥೆ

Photo Credit: AP
ಇಸ್ಲಮಾಬಾದ್: ಸಿಬ್ಬಂದಿಗಳನ್ನು ಕಡಿತಗೊಳಿಸುವ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಪಾಕಿಸ್ತಾನದಲ್ಲಿ ತನ್ನ ಸೀಮಿತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ಘೋಷಿಸಿದೆ.
25 ವರ್ಷಗಳ ಬಳಿಕ ಕರಾಚಿಯಲ್ಲಿನ ತನ್ನ ಕಚೇರಿಯನ್ನು ಮೈಕ್ರೋಸಾಫ್ಟ್ ಮುಚ್ಚಿದ್ದು ಇದರಿಂದ ಪಾಕಿಸ್ತಾನದ ಅರ್ಥವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಮೈಕ್ರೋಸಾಫ್ಟ್ನ ನಿರ್ಧಾರ ನಮ್ಮ ಆರ್ಥಿಕ ಭವಿಷ್ಯ ತೊಂದರೆಗೊಳಗಾಗುವ ಸೂಚನೆಯಾಗಿದೆ. ಈ ಹಿಂದೆ 2022ರಲ್ಲಿ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಬಗ್ಗೆ ಪರಿಗಣಿಸಿತ್ತು. ಆದರೆ ನಮ್ಮ ದೇಶದಲ್ಲಿನ ಅಸ್ಥಿರತೆಯಿಂದಾಗಿ ವಿಯೆಟ್ನಾಂಗೆ ಈ ಅವಕಾಶ ದೊರಕಿತ್ತು. ನಾವು ಸುವರ್ಣಾವಕಾಶ ಕಳೆದುಕೊಂಡೆವು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆರಿಫ್ ಆಲ್ವಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story