ಮಧ್ಯಪ್ರಾಚ್ಯ ಸಂಘರ್ಷ | ಇಂಟರ್ ಸೆಪ್ಟರ್ ಗಳ ಕೊರತೆಯಿದೆ, ಅಮೆರಿಕಕ್ಕೆ ತಿಳಿಸಿದ ಇಸ್ರೇಲ್: ವರದಿ

Photo Credit : AP , PTI
ಟೆಲ್ ಅವೀವ್/ವಾಷಿಂಗ್ಟನ್: ಇರಾನ್ ನೊಂದಿಗಿನ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಇಂಟರ್ ಸೆಪ್ಟರ್ ಗಳ ಸಂಖ್ಯೆ ಇಸ್ರೇಲ್ ನಲ್ಲಿ ತೀವ್ರವಾಗಿ ಕಡಿಮೆಯಾಗಿದೆ ಎಂದು ಅಮೆರಿಕಕ್ಕೆ ತಿಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಅಮೆರಿಕದ ಸುದ್ದಿ ವೆಬ್ಸೈಟ್ ‘ಸೆಮಾಫೋರ್’ ಈ ವಿಷಯದ ಬಗ್ಗೆ ಪರಿಚಿತವಾಗಿರುವ, ಆದರೆ ಹೆಸರು ಬಹಿರಂಗಪಡಿಸದ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.
ಇಸ್ರೇಲ್ ನ ಇಂಟರ್ ಸೆಪ್ಟರ್ ಗಳ ಸಂಗ್ರಹ ಕಡಿಮೆಯಾಗುತ್ತಿರುವ ಬಗ್ಗೆ ಅಮೆರಿಕಕ್ಕೆ ಹಲವು ತಿಂಗಳುಗಳಿಂದಲೇ ಮಾಹಿತಿ ಇದೆ ಎಂದೂ ವರದಿ ಉಲ್ಲೇಖಿಸಿದೆ. ಅದೇ ಸಮಯದಲ್ಲಿ, ಅಮೆರಿಕದ ಇಂಟರ್ ಸೆಪ್ಟರ್ ಗಳ ಸಂಗ್ರಹದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





