ಮಧ್ಯಪ್ರಾಚ್ಯದಲ್ಲಿ ಸಂಘರ್ಷ | ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಶ್ಯ

Photo : gemini AI
ಮಾಸ್ಕೊ: ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ರಶ್ಯ ಗುರುವಾರ ಘೋಷಿಸಿದೆ. ಈ ಮಧ್ಯೆ, ಸಂಭಾವ್ಯ ಕದನ ವಿರಾಮಕ್ಕೆ 4 ಷರತ್ತುಗಳನ್ನು ಇರಾನ್ ಪ್ರಸ್ತಾವಿಸಿರುವುದಾಗಿ ವರದಿಯಾಗಿದೆ.
ಆಕ್ರಮಣ ಮತ್ತು ದಾಳಿಗಳ ಸಂಪೂರ್ಣ ಮತ್ತು ನಿರ್ಣಾಯಕ ನಿಲುಗಡೆ, ಆಕ್ರಮಣ ಅಥವಾ ಯುದ್ಧದ ಪುನರಾರಂಭವನ್ನು ತಡೆಗಟ್ಟಲು ವಸ್ತಿನಿಷ್ಠ ಮತ್ತು ವಿಶ್ವಾಸಾರ್ಹ ಖಾತರಿ ಒದಗಿಸುವುದು, ವಸ್ತು ಮತ್ತು ನೈತಿಕ ಹಾನಿಗಳಿಗೆ ಸಂಪೂರ್ಣ ಪರಿಹಾರ, ಅಂತರರಾಷ್ಟ್ರೀಯ ಕಡಲ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶಕ್ಕಾಗಿ ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ನ ಅಧಿಕಾರ ವ್ಯಾಪ್ತಿಯನ್ನು ಗೌರವಿಸಬೇಕು ಎಂದು ರಶ್ಯಕ್ಕೆ ಇರಾನ್ನ ರಾಯಭಾರಿ ಆಗ್ರಹಿಸಿರುವುದಾಗಿ ರಶ್ಯದ ಸುದ್ದಿಸಂಸ್ಥೆ ತಾಸ್ ವರದಿ ಮಾಡಿದೆ.
Next Story





