ಮಧ್ಯಂತರ ಚುನಾವಣಾ ಫಲಿತಾಂಶ ಅಮೆರಿಕದ ಚರಿತ್ರೆಯಲ್ಲಿ ಒಂದು ದೊಡ್ಡ ಹಿನ್ನಡೆ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ತಮ್ಮ ರಿಪಬ್ಲಿಕನ್ ಪಕ್ಷಕ್ಕೆ ಐತಿಹಾಸಿಕ ಸೋಲುಣಿಸಿದ ಮಧ್ಯಂತರ ಚುನಾವಣೆಯ ಫಲಿತಾಂಶವನ್ನು ಅಮೆರಿಕದ ಚರಿತ್ರೆಯಲ್ಲಿ ಒಂದು ದೊಡ್ಡ ಹಿನ್ನಡೆ ಎಂದು ಕರೆದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲವಾಗಿ ಮರಳುವುದಾಗಿ ರವಿವಾರ ಪ್ರತಿಜ್ಞೆ ಮಾಡಿದ್ದಾರೆ.
ಕಳೆದ ಚುನಾವಣೆಯ ಫಲಿತಾಂಶಗಳೊಂದಿಗೆ ಅಮೆರಿಕವು ಚರಿತ್ರೆಯಲ್ಲೇ ಒಂದು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.
ಆದರೆ ಯಾರೂ ಭಯಪಡುವ ಅಗತ್ಯವಿಲ್ಲ, ನಾವು ಮೊದಲಿಗಿಂತಲೂ ಅತ್ಯಂತ ದೊಡ್ಡ ಮಟ್ಟದಲ್ಲಿ ಮತ್ತು ಶಕ್ತಿಯುತವಾಗಿ ಮತ್ತೆ ಮರಳಲಿದ್ದೇವೆ ಎಂದು ಟ್ರಂಪ್ ತಮ್ಮ `ಟ್ರುತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Next Story




