Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ‘ಫ್ರಾನ್ಸ್‌ನ ಅಶಾಂತಿಗೆ ವಲಸಿಗರೇ ಕಾರಣ...

‘ಫ್ರಾನ್ಸ್‌ನ ಅಶಾಂತಿಗೆ ವಲಸಿಗರೇ ಕಾರಣ ಎಂಬುದು ಸಂಪೂರ್ಣ ಸುಳ್ಳು’: ಟ್ರಂಪ್‌ ಗೆ ಮ್ಯಾಕ್ರನ್ ತಿರುಗೇಟು

‘ಸ್ವೀಕರಿಸಲಾಗದ, ಮೂರ್ಖತನದ ಹೇಳಿಕೆಗಳು’: ಸುಳ್ಳು ಮಾಹಿತಿ ಹರಡುವ ವಿದೇಶಿ ನಾಯಕರ ವಿರುದ್ಧ ವಾಗ್ದಾಳಿ

ವಾರ್ತಾಭಾರತಿವಾರ್ತಾಭಾರತಿ22 Oct 2026 9:52 AM IST
share
‘ಫ್ರಾನ್ಸ್‌ನ ಅಶಾಂತಿಗೆ ವಲಸಿಗರೇ ಕಾರಣ ಎಂಬುದು ಸಂಪೂರ್ಣ ಸುಳ್ಳು’: ಟ್ರಂಪ್‌ ಗೆ ಮ್ಯಾಕ್ರನ್ ತಿರುಗೇಟು

ಪ್ಯಾರಿಸ್: ಫ್ರಾನ್ಸ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ವಲಸಿಗರೇ ಕಾರಣ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ತಳ್ಳಿಹಾಕಿದ್ದಾರೆ. ದೇಶದ ಆಂತರಿಕ ಸಮಸ್ಯೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ವಿದೇಶಿ ನಾಯಕರ ಹೇಳಿಕೆಗಳು ‘ಸ್ವೀಕರಿಸಲಾಗದ ಮತ್ತು ಮೂರ್ಖತನದವು’ ಎಂದು ಅವರು ಕಿಡಿಕಾರಿದ್ದಾರೆ.

ವಾರಾಂತ್ಯದಲ್ಲಿ ಪ್ಯಾರಿಸ್ ಸೇರಿದಂತೆ ಫ್ರಾನ್ಸ್‌ ನ ಹಲವು ನಗರಗಳಲ್ಲಿ ನಡೆದ ಲೂಟಿ ಮತ್ತು ಗಲಭೆಗಳ ಬಳಿಕ, ದೇಶದ ಕುರಿತು ಸುಳ್ಳು ಮಾಹಿತಿ ಹರಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮ್ಯಾಕ್ರಾನ್ ಬುಧವಾರ ಆರೋಪಿಸಿದ್ದಾರೆ.

‘ಫ್ರಾನ್ಸ್‌ ನಲ್ಲಿ ಎಂದಿಗೂ ನಡೆಯದ ಘಟನೆಗಳನ್ನು ಬಿಂಬಿಸುವ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾಗಿದೆ. ನಮ್ಮ ದೇಶದ ಮೇಲೆ ವಲಸಿಗರು ಮತ್ತು ಮುಸ್ಲಿಮರ ದಂಡು ದಾಳಿ ನಡೆಸಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ಅವರನ್ನು ಉದ್ದೇಶಿಸಿಯೇ ಈ ಹೇಳಿಕೆ ನೀಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇತರರ ಜೊತೆಗೆ ಅವರನ್ನೂ ಸೇರಿಸಿಕೊಳ್ಳಬಹುದು’ ಎಂದು ಮ್ಯಾಕ್ರಾನ್ ಉತ್ತರಿಸಿದ್ದಾರೆ.

‘ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ನಾಯಕರು, ಅವರು ಈ ಪ್ರದೇಶದಲ್ಲಿರಲಿ ಅಥವಾ ಅಟ್ಲಾಂಟಿಕ್ ಮಹಾಸಾಗರದ ಆಚೆಯಲ್ಲಿರಲಿ, ಕೆಲವೊಮ್ಮೆ ಅರಿವಿಲ್ಲದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ AI ಸೃಷ್ಟಿಸಿದ ವಿಷಯಗಳನ್ನು ಪುನರಾವರ್ತಿಸುತ್ತಾರೆ. ಇಲ್ಲವೇ, ಫ್ರಾನ್ಸ್‌ ನಲ್ಲಿ ನಡೆದ ಘಟನೆಗಳ ಕುರಿತು ಕೆಲವು ಗುಂಪುಗಳು ಹರಡುತ್ತಿರುವ ಕಥನಗಳನ್ನು ಪ್ರಚಾರ ಮಾಡುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ನಮ್ಮ ದೇಶವನ್ನು ಬಳಸಿಕೊಳ್ಳುತ್ತಿದ್ದಾರೆ. ನಮಗೆ ಇದರ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

‘ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರೆಲ್ಲರೂ ಫ್ರಾನ್ಸ್ ಅನ್ನು ಪ್ರೀತಿಸದವರೇ ಆಗಿದ್ದಾರೆ. ಅಂತಹ ಜನರು ನನಗೆ ನಿಜವಾಗಿಯೂ ಕಿರಿಕಿರಿ ಉಂಟುಮಾಡುತ್ತಾರೆ’ ಎಂದೂ ಮ್ಯಾಕ್ರಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ರಾನ್ಸ್‌ ನ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರೋಟ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಬಂಧಪಟ್ಟ ದೇಶಗಳಿಗೆ ಅಗತ್ಯ ಸ್ಪಷ್ಟನೆ ನೀಡಲು ತಮ್ಮ ಕಚೇರಿ ಸಿದ್ಧವಿದೆ ಎಂದಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವುದನ್ನು ತಡೆಯಲು ಮತ್ತು ಆಧಾರರಹಿತ ಹೇಳಿಕೆಗಳಿಗೆ ಕಡಿವಾಣ ಹಾಕಲು ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ.

‘ಗಡಿಗಳನ್ನು ಮುಚ್ಚಿ’: ಟ್ರಂಪ್ ಆಗ್ರಹ

ಫ್ರಾನ್ಸ್‌ ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ವಲಸೆಯೇ ಕಾರಣ ಎಂದು ಟ್ರಂಪ್ ಸೋಮವಾರ ಆರೋಪಿಸಿದ್ದರು. ಯುರೋಪ್ ತನ್ನ ಗಡಿಗಳನ್ನು ಬಿಗಿಗೊಳಿಸಬೇಕು ಮತ್ತು ಪ್ರತಿಭಟನೆಗಳಲ್ಲಿ ತೊಡಗಿರುವವರಂತಹ ಅಪರಾಧಿಗಳನ್ನು ಹೊರಹಾಕಬೇಕು ಎಂದು ಅವರು ಆಗ್ರಹಿಸಿದ್ದರು.

ವಾಷಿಂಗ್ಟನ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಫ್ರಾನ್ಸ್‌ ನಲ್ಲಿ ನಡೆಯುತ್ತಿರುವುದಕ್ಕೂ ಶಾಲೆಗಳಿಗಾಗಲಿ ಅಥವಾ ಬೇರೆ ಯಾವುದಕ್ಕಾಗಲಿ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ವಲಸೆಗೆ ಸಂಬಂಧಿಸಿದ್ದು. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಗಡಿಗಳನ್ನು ಮುಚ್ಚುವಂತೆ ಹೇಳಿದ್ದೇನೆ’ ಎಂದಿದ್ದರು.

ಮ್ಯಾಕ್ರಾನ್ ಅವರೊಂದಿಗಿನ ಹಿಂದಿನ ಸಂಭಾಷಣೆಯನ್ನು ನೆನಪಿಸಿಕೊಂಡ ಅವರು, ‘ನೀವು ಫ್ರಾನ್ಸ್‌ ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಜಗತ್ತಿನ ಎಲ್ಲರಿಗೂ ಒಳಬರಲು ಅವಕಾಶ ನೀಡುತ್ತಿದ್ದೀರಿ. ಇಡೀ ಜಗತ್ತೇ ಅಲ್ಲಿಗೆ ಬರುತ್ತಿದೆ ಎಂದು ಬಹಳ ಹಿಂದೆಯೇ ಹೇಳಿದ್ದೆ’ ಎಂದು ತಿಳಿಸಿದ್ದರು.

‘ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ’ ಎಂದೂ ಟ್ರಂಪ್ ಹೇಳಿದ್ದರು.

‘ಯುರೋಪ್ ತನ್ನ ಗಡಿಗಳನ್ನು ಮುಚ್ಚದಿದ್ದರೆ ಮತ್ತು ಪ್ರತಿಭಟನೆ ನಡೆಸುತ್ತಿರುವವರಂತಹ ಅಪರಾಧಿಗಳನ್ನು ಹೊರಹಾಕದಿದ್ದರೆ, ಯುರೋಪ್‌ನ ಕಥೆ ಮುಗಿದಂತೆಯೇ’ ಎಂದು ಎಚ್ಚರಿಸಿದ್ದರು.

ರವಿವಾರ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿಯೂ ಟ್ರಂಪ್ ಇದೇ ರೀತಿಯ ಹೇಳಿಕೆ ನೀಡಿದ್ದರು.

‘ಫ್ರಾನ್ಸ್ ಉರಿಯುತ್ತಿದೆ! ಸಂಪೂರ್ಣವಾಗಿ ವಿಭಿನ್ನವಾದ ಪ್ರಪಂಚದ ಜನರ ವಲಸೆ, ಅವರ ಹೃದಯದಲ್ಲಿ ದ್ವೇಷ ಹೊಂದಿರುವ ಜನರು, ಒಂದು ಕಾಲದಲ್ಲಿ ಶ್ರೇಷ್ಠವಾಗಿದ್ದ ಆ ದೇಶವನ್ನು ಛಿದ್ರಗೊಳಿಸಿದ್ದಾರೆ. ನಿಮ್ಮ ಗಡಿಗಳನ್ನು ಮುಚ್ಚಿ ಮತ್ತು ತಡವಾಗುವ ಮೊದಲು ನಿಯಂತ್ರಣ ತೆಗೆದುಕೊಳ್ಳಿ’ ಎಂದು ಅವರು ಪೋಸ್ಟ್ ಮಾಡಿದ್ದರು.

ಜೀವನ ವೆಚ್ಚ ಏರಿಕೆ ವಿರುದ್ಧ ಪ್ರತಿಭಟನೆ

ಫ್ರಾನ್ಸ್‌ ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಕರ ನೇಮಕ ಮತ್ತು ಉತ್ತಮ ಶಾಲಾ ಪರಿಸ್ಥಿತಿಗಳಿಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು. ಬಳಿಕ ಪ್ರತಿಭಟನೆಗಳು ಕಾರ್ಮಿಕ ಸಂಘಟನೆಗಳು ಹಾಗೂ ಜೀವನ ವೆಚ್ಚದ ಏರಿಕೆ ಮತ್ತು ಸಾರ್ವಜನಿಕ ಸೇವೆಗಳ ಬಗ್ಗೆ ಕಳವಳ ಹೊಂದಿರುವ ಜನರನ್ನು ಒಳಗೊಂಡಂತೆ ವಿಸ್ತರಿಸಿದವು.

ಹಣದುಬ್ಬರ ಮತ್ತು ಜೀವನ ವೆಚ್ಚದ ಏರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಲಾಗಿತ್ತು. ಫ್ರಾನ್ಸ್‌ ನ ಆಂತರಿಕ ಸಚಿವಾಲಯದ ಪ್ರಕಾರ, 5.5 ಲಕ್ಷ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ, CGT ಒಕ್ಕೂಟವು ಈ ಸಂಖ್ಯೆ 8 ಲಕ್ಷ ಎಂದು ಹೇಳಿದೆ.

ಗಮನಾರ್ಹವಾಗಿ, ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಬೆಲೆ ಏರಿಕೆ ನಿಯಂತ್ರಣ ಮತ್ತು ಸಾರ್ವಜನಿಕ ಸೇವೆಗಳ ಸುಧಾರಣೆಗೆ ಸಂಬಂಧಿಸಿವೆ. ವಲಸೆಯು ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರಲಿಲ್ಲ.

UAE, ಬಹ್ರೇನ್‌ ನಿಂದ ಡೀಸೆಲ್ ಆಮದು

ತಮ್ಮ ಗಲ್ಫ್ ಪ್ರವಾಸದ ಮುಕ್ತಾಯದ ಸಂದರ್ಭದಲ್ಲಿ ಖತರ್ ನಲ್ಲಿ ಮಾತನಾಡಿದ ಮ್ಯಾಕ್ರಾನ್, ಸಂಯುಕ್ತ ಅರಬ್ ಎಮಿರೇಟ್ಸ್‌ ನಿಂದ (UAE) ಪ್ರತಿ ತಿಂಗಳು 1 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಆಮದು ಮಾಡಿಕೊಳ್ಳಲು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದೆ ಎಂದು ಘೋಷಿಸಿದ್ದಾರೆ.

ಇದೇ ರೀತಿಯಲ್ಲಿ, ಬಹ್ರೇನ್‌ ನಿಂದಲೂ ಪ್ರತಿ ತಿಂಗಳು 1 ಲಕ್ಷ ಟನ್ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.

Tags

MigrantsFranceMacronTrump
share
ವಾರ್ತಾಭಾರತಿ
ವಾರ್ತಾಭಾರತಿ
Next Story
X