ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : ನಾಲ್ವರು ಮೃತ್ಯು

Photocradit : UNB
ಢಾಕಾ : ಚುನಾವಣೆಯನ್ನು ದಿಕ್ಕರಿಸಿ ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದ ವೇಳೆ ಮೊಹಂಗಣಿ ಎಕ್ಸ್ ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಮಂಗಳವಾರ ಬೆಂಕಿ ಹಚ್ಚಿದ ಘಟನೆ ವರದಿಯಾಗಿದ್ದು, ಈ ಅವಘಡದಲ್ಲಿ ತಾಯಿ ಮತ್ತು ಮಗ ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು indiatoday ವರದಿ ಮಾಡಿದೆ.
ಬಾಂಗ್ಲಾದೇಶದ ವಿರೋಧ ಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ಚುನಾವಣೆಯನ್ನು ದಿಕ್ಕರಿಸಿ, ದೇಶವ್ಯಾಪಿ ಬಂದ್ ಗೆ ಕರೆ ನೀಡಿತ್ತು. ಈ ವೇಳೆಯಲ್ಲಿ ದುಷ್ಕರ್ಮಿಗಳು ರೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಎನ್ನಲಾಗಿದೆ. ರೈಲಿಗೆ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಬಾಂಗ್ಲಾದಲ್ಲಿ ಹೆಚ್ಚುತ್ತಿದ್ದು, ಒಂದೇ ತಿಂಗಳಿನಲ್ಲಿ ವರದಿಯಾಗುತ್ತಿರುವ ಐದನೇ ಪ್ರಕರಣ ಇದಾಗಿದೆ.
Next Story





