ಯೆಮನ್ ಬಳಿ ಹಡಗಿನ ಮೇಲೆ ಕ್ಷಿಪಣಿ ದಾಳಿ: ವರದಿ

ಸಾಂದರ್ಭಿಕ ಚಿತ್ರ | Photo Credit : NDTV
ಸನಾ, ಅ.18: ಯೆಮನ್ ನ ಏಡನ್ ಕೊಲ್ಲಿಯ ಬಳಿ ಶನಿವಾರ ಹಡಗೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬ್ರಿಟನ್ ನ ಮಿಲಿಟರಿ ಹೇಳಿದೆ.
ಒಮಾನ್ ನ ಸೊಹಾರ್ನಿಂದ ಜಿಬೌಟಿಗೆ ಪ್ರಯಾಣಿಸುತ್ತಿದ್ದ ಕ್ಯಾಮರೂನ್ ಧ್ವಜ ಹೊಂದಿರುವ ಟ್ಯಾಂಕರ್ ಹಡಗಿನ ಮೇಲೆ ಏಡನ್ ಬಂದರಿನ ಸುಮಾರು 210 ಕಿ.ಮೀ ಪೂರ್ವದಲ್ಲಿ ಕ್ಷಿಪಣಿ ದಾಳಿ ನಡೆದಿದ್ದು ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಕೊಂಡಿಲ್ಲ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಹಡಗನ್ನು ತ್ಯಜಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಬ್ರಿಟನ್ ನ `ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ' ಹೇಳಿದೆ.
Next Story





