ಬಹರೈನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ: ಇರಾನ್ ಮಿಲಿಟರಿ ಮಾಹಿತಿ

Screengrab: X/@PresstvExtra
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದ್ದು, ಬಹರೈನ್ನಲ್ಲಿರುವ ಯುಎಸ್ ಮಿಲಿಟರಿ ಕೇಂದ್ರಗಳು ಮತ್ತು ಇಂಧನ ಟ್ಯಾಂಕ್ಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಮಿಲಿಟರಿ ಹೇಳಿದೆ.
ಬಹರೈನ್ ನಲ್ಲಿನ ಅಮೆರಿಕದ ನೆಲೆಯ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಯುಎಸ್ ಮಿಲಿಟರಿ ಸ್ವತ್ತುಗಳು ಮತ್ತು ಇಂಧನ ಟ್ಯಾಂಕ್ಗಳಿಗೆ ಹಾನಿಯಾಗಿದೆ ಎಂದು ಇರಾನ್ನ Tasnim news agency ವರದಿ ಮಾಡಿದೆ.
ಜಾಗತಿಕ ದುರಹಂಕಾರದ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿ ಬಹರೈನ್ನ ಶೇಖ್ ಈಸಾ ವಾಯುನೆಲೆಯಲ್ಲಿರುವ ವಿಮಾನ ನಿಲುಗಡೆ ಪ್ರದೇಶ, ಇಂಧನ ಟ್ಯಾಂಕ್ಗ ಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿದೆ.
ಅಮೆರಿಕ ಈ ವಾಯುನೆಲೆಯನ್ನು ಪ್ರಾದೇಶಿಕ ಗುರಿಗಳ ವಿರುದ್ಧ ವಿಶೇಷವಾಗಿ ನಮ್ಮ ದೇಶದ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಲು ಬಳಸಿಕೊಂಡಿದೆ ಎಂದು ಇರಾನ್ ಆರೋಪಿಸಿದೆ.
Next Story




