ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈರಿಗೆ ಏನೂ ಆಗಿಲ್ಲ: ಅಬ್ಬಾಸ್ ಅರಘ್ಚಿ

ಮೊಜ್ತಾಬಾ ಖಾಮಿನೈ | Photo Credit : AP , PTI
ಟೆಹ್ರಾನ್ : ಇರಾನ್ ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈರಿಗೆ ಗಾಯಗೊಂಡಿದ್ದಾರೆ ಎಂಬ ಅಮೆರಿಕದ ಅಧಿಕಾರಿಗಳ ವರದಿ ಹೊರಬಿದ್ದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಸ್ಪಷ್ಟನೆ ನೀಡಿದ್ದ, “ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈರಿಗೆ ಯಾವುದೇ ತೊಂದರೆಯಾಗಿಲ್ಲ” ಎಂದು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಶುಕ್ರವಾರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಮೊಜ್ತಬಾ ಖಾಮಿನೈ ಅವರು ಗಾಯಗೊಂಡಿರಬಹುದು ಎಂದು ಹೇಳಿಕೆ ನೀಡಿದ್ದರು.
ಈ ಕುರಿತು MS NOWಗೆ ನೀಡಿದ ಸಂದರ್ಶನದಲ್ಲಿ ಅರಘ್ಚಿ, “ನೂತನ ಸರ್ವೋಚ್ಚ ನಾಯಕರಿಗೆ ಯಾವುದೇ ತೊಂದರೆಯಾಗಿಲ್ಲ. ಅವರು ನಿನ್ನೆ ತಮ್ಮ ಸಂದೇಶವನ್ನು ಕಳುಹಿಸಿದ್ದಾರೆ ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ನೂತನ ಸರ್ವೋಚ್ಚ ನಾಯಕನಾಗಿರುವ ಮೊಜ್ತಬಾ ಖಾಮಿನೈ ತಮ್ಮ ಮೊದಲ ಭಾಷಣದಲ್ಲಿ, ಹಾರ್ಮುಝ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚುವ ಕ್ರಮ ಮುಂದುವರಿಸಲಾಗುವುದು. ತಮ್ಮ ದೇಶದ ಮೇಲೆ ಯುಎಸ್–ಇಸ್ರೇಲ್ ಯುದ್ಧ ಮುಂದುವರಿದರೆ ಗಲ್ಫ್ ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ತೀವ್ರ ದಾಳಿ ನಡೆಸಲಾಗುವುದು. ಅಲ್ಲಿನ ನೆಲೆಗಳನ್ನು ಮುಚ್ಚುವಂತೆಯೂ ಅವರು ಎಚ್ಚರಿಕೆ ನೀಡಿದ್ದರು.





