ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಅಮೆರಿಕ, ಇಸ್ರೇಲ್‍ಗೆ `ನಿರ್ಣಾಯಕ ಹೊಡೆತ' : ಇರಾನ್ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ

ಟೆಹರಾನ್, ಜೂ.4: ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಅಮೆರಿಕ ಮತ್ತು ಇಸ್ರೇಲ್‍ಗೆ ನಿರ್ಣಾಯಕ ಹೊಡೆತ ಬಿದ್ದಿದೆ ಎಂದು ಇರಾನ್‍ನ ಸರ್ವೋಚ್ಛ ನಾಯಕ ಆಯತುಲ್ಲಾ ಮೊಜ್ತಬಾ ಖಾಮಿನೈ ಗುರುವಾರ ಪ್ರತಿಪಾದಿಸಿದ್ದಾರೆ.
ದೇಶದ ಶತ್ರುಗಳು `ನಿರ್ಣಾಯಕ ಹೊಡೆತವನ್ನು ಎದುರಿಸಿದ ನಂತರ ಈಗ ಆಳವಾದ ಅವಮಾನವನ್ನು ಅನುಭವಿಸುತ್ತಿದ್ದಾರೆ ಎಂದ ಖಾಮಿನೈ, ಇಸ್ರೇಲ್ ಮತ್ತು ಅಮೆರಿಕವು ಸಾರ್ವಜನಿಕರಲ್ಲಿ ಅನುಮಾನ, ಹತಾಶೆ, ಭಯ, ಅಪನಂಬಿಕೆ ಮತ್ತು ವಿಭಜನೆಯ ಬೀಜವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಇವರ ಕೆಟ್ಟ ಪಿತೂರಿಯನ್ನು ವಿಫಲಗೊಳಿಸಲು ಜನತೆ ಒಗ್ಗೂಡಬೇಕು ಎಂದು ಕರೆ ನೀಡಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:
ಇರಾನ್ ಅಮೆರಿಕದ ಪಡೆಗಳನ್ನು ಗುರಿಯಾಗಿಸುವವರೆಗೆ ಪೂರ್ಣ ಪ್ರಮಾಣದ ಯುದ್ಧವನ್ನು ಪುನರಾರಂಭಿಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಾಗಿ ದಿ ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಮೇಲೆ ದಾಳಿ ನಡೆಸಿರುವುದನ್ನು ಇರಾನ್‍ನ ಐಆರ್‌ಜಿಸಿ ನಿರಾಕರಿಸಿದ್ದು ಅಮೆರಿಕದ ಪೇಟ್ರಯಾಟಿಕ್ ವಾಯುರಕ್ಷಣಾ ಕ್ಷಿಪಣಿ ತಾಂತ್ರಿಕ ಸಮಸ್ಯೆಯಿಂದ ಟರ್ಮಿನಲ್ ಮೇಲೆ ಪತನಗೊಂಡಿದ್ದರಿಂದ ಹಾನಿ ಸಂಭವಿಸಿದೆ ಎಂದು ಪ್ರತಿಪಾದಿಸಿದೆ. ಇರಾನ್ ಪ್ರಯೋಗಿಸಿದ ಡ್ರೋನ್, ಕ್ಷಿಪಣಿಗಳನ್ನು ಪ್ರತಿಬಂಧಿಸುವ ಪ್ರಯತ್ನದಲ್ಲಿ ಸಂಭವಿಸಿದ ದೋಷದಿಂದಾಗಿ ಪೇಟ್ರಿಯಾಟಿಕ್ ಕ್ಷಿಪಣಿ ಕುವೈತ್‌ನ ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್‍ಗೆ ಪತನಗೊಂಡಿದೆ ಎಂದು ಐಆರ್‌ಜಿಸಿ ಹೇಳಿದೆ. ಇದನ್ನು ಅಮೆರಿಕ ನಿರಾಕರಿಸಿದೆ.






