`ಯುದ್ಧವೂ ಅಲ್ಲ, ಶಾಂತಿಯೂ ಅಲ್ಲ' ಪರಿಸ್ಥಿತಿ ಕೊನೆಗೊಳಿಸಲು ಅಧಿಕಾರಿಗಳಿಗೆ ಮೊಜ್ತಬಾ ಖಾಮಿನೈ ಸೂಚನೆ

ಮೊಜ್ತಬಾ ಖಾಮಿನೈ | Photo Credit : PTI
ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಗಳಿಗೆ ದೊಡ್ಡ ಅಡೆತಡೆಗಳು ಎದುರಾಗಿರುವ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗೆ ಪ್ರಸ್ತುತ ಇರುವ `ಯುದ್ಧವೂ ಅಲ್ಲ, ಶಾಂತಿಯೂ ಅಲ್ಲ' ಎಂಬ ಪರಿಸ್ಥಿತಿಯನ್ನು ಕೊನೆಗೊಳಿಸುವಂತೆ ಇರಾನ್ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗೆಯೇ, ಇರಾನ್ ಮಾತುಕತೆಗೆ ಸಿದ್ಧವಾಗಿದೆ ಆದರೆ ಯಾವುದೇ ಒತ್ತಡ ಅಥವಾ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ದೇಶದ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಹೇಳಿದ್ದಾರೆ.
ನಾವು ಗೌರವಯುತವಾಗಿ ಮಾತುಕತೆ ನಡೆಸಿ ಈ ವಿಷಯವನ್ನು ಗೌರವಯುತವಾಗಿಯೇ ಮುಕ್ತಾಯಗೊಳಿಸಬಹುದು. ಆದರೆ ನಾವು ಬಲಪ್ರಯೋಗ ಮತ್ತು ಬೆದರಿಕೆಗಳಿಗೆ ಶರಣಾಗುವುದಿಲ್ಲ. ನಾವು ನಮ್ಮ ಹಕ್ಕುಗಳನ್ನು ಬಯಸುತ್ತೇವೆ. ದೌರ್ಜನ್ಯಕ್ಕೆ ತಲೆಬಾಗುವುದಿಲ್ಲ ಎಂದು ಪೆಝೆಶ್ಕಿಯನ್ ಸ್ಪಷ್ಟಪಡಿಸಿರುವುದಾಗಿ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.




