ಪಾಕಿಸ್ತಾನಕ್ಕೆ ಮೊಜ್ತಬಾ ಖಾಮಿನೈ ರಹಸ್ಯ ಸಂದೇಶ ರವಾನೆ : ವರದಿ

ಮೊಜ್ತಬಾ ಖಾಮಿನೈ | Photo Credit : PTI
ಇಸ್ಲಾಮಾಬಾದ್,ಜು.22: ಇರಾನ್ ಹಾಗೂ ಅಮೆರಿಕ ನಡುವೆ ಪೂರ್ಣ ಪ್ರಮಾಣದ ಸಂಘರ್ಷ ನಡೆಯುತ್ತಿದ್ದರೂ, ಹಿಂಬಾಗಿಲ ಮೂಲಕ ನಡೆಯುತ್ತಿರುವ ರಾಜತಾಂತ್ರಿಕ ಮಟ್ಟದ ಮಾತುಕತೆಗಳು ಮುಂದುವರಿದಿವೆ. ಇರಾನ್ನ ಗೃಹ ಸಚಿವ ಎಸ್ಕಂದರ್ ಮೊಮೆನಿ ಅವರು ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯ ಕಾರ್ಯಾಲಯದಲ್ಲಿ ಪಾಕ್ ಸೇನಾ ವರಿಷ್ಠ ಆಸೀಮ್ ಮುನೀರ್ ಜೊತೆ ಬುಧವಾರ ಉನ್ನತಮಟ್ಟದ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ.
ಈ ಸಂದರ್ಭ ಅವರು ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರು ನೀಡಿದ ರಹಸ್ಯ ಸಂದೇಶವೊಂದನ್ನು ಆಸೀಮ್ ಮುನೀರ್ ಅವರಿಗೆ ತಲುಪಿಸಿದ್ದಾರೆಂದು ಪಾಕ್ನ ಭದ್ರತಾ ಮೂಲಗಳು ತಿಳಿಸಿವೆ.
ಪಶ್ಚಿಮ ಏಷ್ಯದಲ್ಲಿ ಉದ್ವ್ಗಿಗ್ನತೆಯನ್ನು ಅಮೆರಿಕದ ಜೊತೆ ಸಂಧಾನ ಮಾತುಕತೆಗೆ ನೂತನ ಕಾರ್ಯಚೌಕಟ್ಟನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತೆಂದು ತಿಳಿದುಬಂದಿದೆ.
Next Story




