ಪ್ರತಿಭಟನೆಗಳ ನಡುವೆ ಬಾಂಗ್ಲಾದಲ್ಲಿ ದೇವಳಗಳ ರಕ್ಷಣೆಗೆ ನಿಂತ ಮುಸ್ಲಿಂ ವಿದ್ಯಾರ್ಥಿಗಳು; ವಿಡಿಯೋ ವೈರಲ್
Image Credit: X/@JusticeBengal
ಢಾಕಾ: ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾದ ನಂತರ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ಬಾಂಗ್ಲಾದೇಶದಲ್ಲಿ ಪ್ರತಿಭಟನಾನಿರತ ಮುಸ್ಲಿಂ ವಿದ್ಯಾರ್ಥಿಗಳು ಢಾಕಾದ ಢಾಕೇಶ್ವರಿ ದೇವಸ್ಥಾನಕ್ಕೆ ಕಾವಲು ನಿಂತು ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ. ದೇವಸ್ಥಾನ ಸುರಕ್ಷಿತವಾಗಿರುವಂತೆ ಈ ವಿದ್ಯಾರ್ಥಿಗಳು ನೋಡಿಕೊಳ್ಳುತ್ತಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವಾರು ಚಿತ್ರಗಳಲ್ಲಿ ಮದರಸಾ ವಿದ್ಯಾರ್ಥಿಗಳು ಸೇರಿದಂತೆ ಮುಸ್ಲಿಂ ವಿದ್ಯಾರ್ಥಿಗಳು ದೇಶದಾದ್ಯಂತ ಇರುವ ದೇವಸ್ಥಾನಗಳಿಗೆ ರಕ್ಷಣೆ ಒದಗಿಸುತ್ತಿರುವುದು ಕಾಣಿಸುತ್ತದೆ. #HindusAreSafeInBangladesh ಎಂಬ ಹ್ಯಾಶ್ಟ್ಯಾಗ್ ಕೂಡ ಸಾಕಷ್ಟು ಸುದ್ದಿಯಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿವೆ ಎಂಬ ಸುದ್ದಿಗಳ ನಡುವೆ ಈ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಭಾರತದ ರಿಪಬ್ಲಿಕ್ ಮಾಧ್ಯಮವು ಈ ಫೋಟೋಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ತಟಸ್ಥ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನಾನಿರತ ಮುಸ್ಲಿಂ ವಿದ್ಯಾರ್ಥಿಗಳಿಂದ ಈ ದೇವಳಗಳನ್ನು ರಕ್ಷಿಸಲು ಕಾವಲು ಕಾಯುತ್ತಿದ್ದಾರೆಂದು ಬಿಂಬಿಸಿದೆ. ಇದು ಬಾಂಗ್ಲಾದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ, ಭಾರತದ ಮುಖ್ಯವಾಹಿನಿ ಮಾಧ್ಯಮಗಳು ತಾರತಮ್ಯಕಾರಿ ವರದಿ ಪ್ರಕಟಿಸಿ ಭಯದ ವಾತಾವರಣ ಮೂಡಿಸಲು ಯತ್ನಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
Students are guarding the Dhakeshwari Temple in Dhaka.Video: Dhakeshwari Mandir, 1.00 am (midnight), August 6, 2024#ProtectMinorities #ProtectAllFaiths #SafeBangladesh #NationalUnity #CommunalHarmony #HindusAreSafeInBangladesh pic.twitter.com/XhoCEYDbBz
— BUETian (@buetian62) August 5, 2024
We all are United ,We all are one. Our country is home to a diverse and harmonious blend of Muslims, Hindus, Buddhists, and Christians. Let's stay united and support people of all faiths in our community.Temples are a significant part of our nation's… pic.twitter.com/UE0HnRJPVo
— BringingJusticetoYou (@JusticeBengal) August 5, 2024