ಮೆಟಾ ಸಿಇಒ ಝುಕರ್ ಬರ್ಗ್ ಅವರೊಂದಿಗಿನ ನನ್ನ ಹೋರಾಟ ಎಕ್ಸ್ ನಲ್ಲಿ ನೇರ ಪ್ರಸಾರವಾಗಲಿದೆ ಎಂದ ಮಸ್ಕ್

Twitter CEO Elon Musk (left) and Mark Zuckerberg. Credit: Reuters/AP/PTI Photos
ಹೊಸದಿಲ್ಲಿ: ಮೆಟಾ ಸಿಇಒ ಝುಕರ್ ಬರ್ಗ್ ಅವರೊಂದಿಗಿನ ನನ್ನ ಹೋರಾಟವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಎಕ್ಸ್ ನ ಮಾಲಿಕ ಎಲೋನ್ ಮಸ್ಕ್ ಇಂದು ಘೋಷಿಸಿದ್ದಾರೆ,
. ಇಬ್ಬರು ಟೆಕ್ ದಿಗ್ಗಜರು ಕಳೆದ ತಿಂಗಳು ಕೇಜ್ ಫೈಟ್ ನಲ್ಲಿ ಪರಸ್ಪರ ಎದುರಿಸುವ ಸವಾಲನ್ನು ಸ್ವೀಕರಿಸಿದಾಗ ಆನ್ ಲೈನ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿತ್ತು
, "ಝಕ್ ಹಾಗೂ ಮಸ್ಕ್ ನಡುವಿನ ಹೋರಾಟವು ಎಕ್ಸ್ ನಲ್ಲಿ ನೇರ ಪ್ರಸಾರವಾಗಲಿದೆ. ಎಲ್ಲ ಹಣವು ಮಾಜಿ ಸೈನಿಕರ ಕಲ್ಯಾಣಕ್ಕಾಗಿನ ಚಾರಿಟಿಗೆ ಹೋಗುತ್ತದೆ" ಎಂದು ಟ್ವೀಟ್ ನಲ್ಲಿ ಮಸ್ಕ್ ಹೇಳಿದ್ದಾರೆ.
"ದಿನವಿಡೀ ತೂಕವನ್ನು ಎತ್ತುತ್ತಿದ್ದೇನೆ, ಹೋರಾಟಕ್ಕೆ ತಯಾರಿ ನಡೆಸುತ್ತಿದ್ದೇನೆ . ನನಗೆ ವ್ಯಾಯಾಮ ಮಾಡಲು ಸಮಯವಿಲ್ಲ ಆದ್ದರಿಂದ ನನ್ನ ಕಚೇರಿಗೆ ಭಾರ ಎತ್ತುವ ವಸ್ತುಗಳನ್ನು ತರುತ್ತೇನೆ'' ಎಂದು ಎಕ್ಸ್ ಗೆ ಮಸ್ಕ್ ಹೇಳಿದ್ದಾರೆ.
51 ವರ್ಷದ ಮಸ್ಕ್ ಹಾಗೂ 39 ವರ್ಷದ ಝುಕರ್ ಬರ್ಗ್ ಅವರು ರಾಜಕೀಯದಿಂದ ತೊಡಗಿ ಕೃತಕ ಬುದ್ಧಿಮತ್ತೆಯವರೆಗಿನ ಎಲ್ಲದರ ಬಗ್ಗೆ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳೊಂದಿಗೆ ವರ್ಷಗಳಿಂದ ಪರಸ್ಪರ ವಾಗ್ವಾದ ನಡೆಸುತ್ತಿದ್ದಾರೆ.
ಆದರೆ ಮೆಟಾ ಹೊಸ ಅಪ್ಲಿಕೇಶನ್ 'ಥ್ರೆಡ್ಸ್ 'ಘೋಷಿಸಿದಾಗ ಪೈಪೋಟಿಯು ಹೊಸ ಎತ್ತರವನ್ನು ತಲುಪಿತು - ಇದು Twitter ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ತಮಾಷೆಯಾಗಿ, ಮಸ್ಕ್ ತನ್ನ ಅಭಿಮಾನಿಗಳಿಗೆ ಟ್ವಿಟರ್ನಲ್ಲಿ ಝುಕರ್ ಬರ್ಗ್ ಜೊತೆ ಕೇಜ್ ಫೈಟ್ ಗೆ ಸಿದ್ಧ ಎಂದು ಹೇಳಿದ್ದರು.
ಮಾರ್ಷಲ್ ಆರ್ಟ್ಸ್ ವೀಡಿಯೊಗಳನ್ನು ಪೋಸ್ಟ್ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿದ ಝುಕರ್ ಬರ್ಗ್, ಸಂದೇಶದ ಸ್ಕ್ರೀ ನ್ ಶಾಟ್ ಹಾಗೂ ಪ್ರತಿಕ್ರಿಯೆಯೊಂದಿಗೆ ತಮ್ಮ Instagram ಸ್ಟೋರೀಸ್ ನಲ್ಲಿ "ನನಗೆ ಸ್ಥಳವನ್ನು ಕಳುಹಿಸಿ’’ ಎಂದು ಪ್ರತಿಕ್ರಿಯಿಸಿದ್ದಾರೆ:







