ಸೂರ್ಯನ ‘ಸನಿಹ’ಕ್ಕೆ ತಲುಪಿದ ನಾಸಾದ ಸೋಲಾರ್ ಪ್ರೋಬ್ ನೌಕೆ

PC : NASA
ವಾಶಿಂಗ್ಟನ್ : ಸೂರ್ಯನ ಅಧ್ಯಯನಕ್ಕಾಗಿ ತಾನು ಕಳುಹಿಸಿರುವ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯು ಸುರಕ್ಷಿತವಾಗಿದೆ ಹಾಗೂ ಸಹಜವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಶುಕ್ರವಾರ ತಿಳಿಸಿದೆ.
ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯು ಸೂರ್ಯನ ಮೇಲ್ಮೆಯಿಂದ ಸುಮಾರು 30.80 ಲಕ್ಷ ಮೈಲು ದೂರದಲ್ಲಿದ್ದು, ಹೊಸ ದಾಖಲೆಯನ್ನು ಸ್ಥಾಪಿಸಿದೆಯೆಂದು ನಾಸಾದ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಿಕೋಲಾ ಫಾಕ್ಸ್ ಹೇಳಿದ್ದಾರೆ. ಈವರೆಗೆ ಯಾವುದೇ ಮಾನವ ನಿರ್ಮಿತ ಸಾಧನವು ಸೂರ್ಯನ ಇಷ್ಟೊಂದು ಸನಿಹಕ್ಕೆ ತಲುಪಿಲ್ಲವೆಂದು ನಾಸಾ ಮೂಲಗಳು ತಿಳಿಸಿವೆ.
ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯು 2018ರಲ್ಲಿ ಉಡಾವಣೆಗೊಂಡಿತ್ತು.
ಕಳೆದ ಕೆಲವು ದಿನಗಳಿಂದ ಪಾರ್ಕರ್ ಸೋಲಾರ್ ಪ್ರೋಬ್, ನಾಸಾದ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕವನ್ನು ಕಡಿದುಕೊಂಡಿತ್ತು. ಗುರುವಾರ ಮಧ್ಯರಾತ್ರಿಯ ವೇಳೆಗೆ ಅದು ನೌಕೆಯಿಂದ ಮತ್ತೆ ಸಂಕೇತಗಳನ್ನು ಸ್ವೀಕರಿಸಿದೆಯೆಂದು ಬಿಬಿಸಿ ವರದಿ ಮಾಡಿದೆ.
Next Story





