ಹಾರ್ಮುಝ್ ನಲ್ಲಿ ಸೂಪರ್ ಟ್ಯಾಂಕರ್ ಗೆ ಅಪ್ಪಳಿಸಿದ ನೌಕಾ ಸ್ಫೋಟಕ
ಸ್ಫೋಟ, ಬೆಂಕಿ ಅವಘಡ ಸಂಭವಿಸಿದೆ: ಐಆರ್ಜಿಸಿ ಹೇಳಿಕೆ

Photo: screengrab/x.com/clashreport
ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯ ದಕ್ಷಿಣ ಭಾಗದಲ್ಲಿ ‘ಅನಧಿಕೃತ’ ಮಾರ್ಗದಲ್ಲಿ ಸಾಗುತ್ತಿದ್ದ ಸೂಪರ್ ಟ್ಯಾಂಕರ್ವೊಂದು ನೌಕಾ ಸ್ಫೋಟಕಕ್ಕೆ ಡಿಕ್ಕಿ ಹೊಡೆದಿದ್ದು, ಸ್ಫೋಟ ಮತ್ತು ಬೆಂಕಿ ಅವಘಡ ಸಂಭವಿಸಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ತಿಳಿಸಿದೆ.
ರವಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ‘ತಸ್ನಿಮ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಚ್ಚಾ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ತನ್ನ ಸಂಚಾರ ಸಂಚಾರ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿ ಜಲಸಂಧಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾಗ ನೌಕಾ ಸ್ಫೋಟಕಕ್ಕೆ ಅಪ್ಪಳಿಸಿದೆ ಎಂದು ಐಆರ್ಜಿಸಿ ಹೇಳಿದೆ.
ಶನಿವಾರವೂ ಹೆಸರನ್ನು ಬಹಿರಂಗಪಡಿಸದ ಮತ್ತೊಂದು ಸೂಪರ್ ಟ್ಯಾಂಕರ್ ನೌಕಾ ಸ್ಫೋಟಕಕ್ಕೆ ಡಿಕ್ಕಿ ಹೊಡೆದು ಭಾರಿ ಬೆಂಕಿ ಅವಘಡಕ್ಕೆ ತುತ್ತಾಗಿತ್ತು ಎಂದು ಐಆರ್ಜಿಸಿ ಪ್ರತಿಪಾದಿಸಿದೆ.
Next Story




