ಭಾರತದ ವಿರುದ್ಧದ ದಾಳಿಯನ್ನು ನವಾಜ್ ಷರೀಫ್ ವಿನ್ಯಾಸಗೊಳಿಸಿದ್ದರು:ಪಾಕಿಸ್ತಾನ ಸಚಿವೆಯ ಹೇಳಿಕೆ

PC : NDTV
ಇಸ್ಲಾಮಾಬಾದ್: ಭಾರತದ ವಿರುದ್ಧದ ಇತ್ತೀಚಿನ ದಾಳಿಯನ್ನು ಪಕ್ಷದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನೇರ ಮೇಲ್ವಿಚಾರಣೆಯಲ್ಲಿ ಪರಿಕಲ್ಪನೆ ಮಾಡಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ ಎಂದು ಆಡಳಿತರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್-ಎನ್) ಪಕ್ಷದ ಹಿರಿಯ ನಾಯಕರು ಪ್ರತಿಪಾದಿಸಿದ್ದಾರೆ.
ಭಾರತದ ಇತ್ತೀಚಿನ ದಾಳಿಗಳಿಗೆ ಪ್ರತಿದಾಳಿಯನ್ನು ರೂಪಿಸುವಲ್ಲಿ ನವಾಜ್ ಷರೀಫ್ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ವಿರುದ್ಧದ ಸಂಪೂರ್ಣ ಕಾರ್ಯಾಚರಣೆಯನ್ನು ಮಾಜಿ ಪ್ರಧಾನಿ ಮತ್ತು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಮೇಲ್ವಿಚಾರಣೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅವರೊಬ್ಬ `ಎ,ಬಿ,ಸಿ,ಡಿ ರೀತಿಯ ನಾಯಕರಲ್ಲ. ಅವರ ಕಾರ್ಯವೇ ಅವರ ಬಗ್ಗೆ ಹೇಳುತ್ತದೆ' ಎಂದು ಪಂಜಾಬ್ ಪ್ರಾಂತೀಯ ಸರಕಾರದ ಮಾಹಿತಿ ಸಚಿವೆ ಅಜ್ಮಾ ಬುಖಾರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
Next Story