NBC ಸುದ್ದಿಸಂಸ್ಥೆಯ ಹೆಲಿಕಾಪ್ಟರ್ ಪತನ: ಕನಿಷ್ಠ ಮೂವರು ಮೃತ್ಯು

Photo Credit : aljazeera.com
ಲಾಸ್ ಎಂಜಲಿಸ್: ಅಮೆರಿಕದ ಲಾಸ್ ಎಂಜಲಿಸ್ನ ವಸತಿ ಪ್ರದೇಶವೊಂದರಲ್ಲಿ ಮಂಗಳವಾರ ಎನ್ಬಿಸಿ ಸ್ಥಳೀಯ ಸುದ್ದಿ ಸಂಸ್ಥೆಯ ಹೆಲಿಕಾಪ್ಟರ್ ಪತನಗೊಂಡು ಬೆಂಕಿಗಾಹುತಿಯಾಗಿದ್ದು, ಕನಿಷ್ಠ ಮೂರು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಮತ್ತು ಸಿಟಿ ಬಸ್ ನಡುವೆ ನಡೆದ ಅಪಘಾತದ ಸುದ್ದಿಯನ್ನು ವರದಿ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ನೇರ ಪ್ರಸಾರದ ವೇಳೆ ತಮ್ಮ ಸಂಸ್ಥೆಯ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಎನ್ಬಿಸಿ4 ಲಾಸ್ ಎಂಜಲಿಸ್ ಸಂಸ್ಥೆಯ ನಿರೂಪಕಿ ಕಾಲಿನ್ ವಿಲಿಯಮ್ಸ್ ಧೃಡಪಡಿಸಿದ್ದಾರೆ. ಹೆಲಿಕಾಪ್ಟರ್ ಪತನಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ನೆಲದ ಮೇಲಿದ್ದ ಕನಿಷ್ಠ ನಾಲ್ಕು ಕಾರುಗಳು ಮತ್ತು ಎರಡು ಕಂಟೇನರ್ಗಳು ಬೆಂಕಿಗಾಹುತಿಯಾದವು ಎಂದು ವರದಿಯಾಗಿದೆ.
Next Story




