Nepal ಪ್ರವಾಹ: ನಾಪತ್ತೆಯಾದ 213 ಭಾರತೀಯರನ್ನು ಮೃತಪಟ್ಟಿದ್ದಾರೆಂದು ಘೋಷಿಸುವ ಪ್ರಕ್ರಿಯೆ ಆರಂಭ

Photo Credit : PTI
ಕಠ್ಮಂಡು, ನ. 26: ಆಗಸ್ಟ್ ನಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ನಾಪತ್ತೆಯಾದ 213 ಭಾರತೀಯ ಪ್ರಜೆಗಳನ್ನು ಮೃತಪಟ್ಟಿದ್ದಾರೆಂದು ಪರಿಗಣಿಸಿ, ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆಯನ್ನು ನೇಪಾಳ ಸರಕಾರ ಆರಂಭಿಸಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರವು ನಾಪತ್ತೆಯಾದ 213 ಭಾರತೀಯ ಪ್ರಜೆಗಳ ಪಟ್ಟಿಯನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ಪಟ್ಟಿಗೆ ಹೆಸರುಗಳನ್ನು ಸೇರ್ಪಡೆಗೊಳಿಸುವುದು, ಅಳಿಸುವುದು ಅಥವಾ ವಿವರಗಳನ್ನು ತಿದ್ದುಪಡಿ ಮಾಡುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ.
ನಾಪತ್ತೆಯಾಗಿರುವವರ ಕುಟುಂಬ ಸದಸ್ಯರು ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳು ಅಥವಾ ಉದ್ದೇಶಿತ ತಿದ್ದುಪಡಿಗಳನ್ನು ಡಿ. 2ರೊಳಗೆ ಸಲ್ಲಿಸುವಂತೆ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Next Story




