ರಾಜತಾಂತ್ರಿಕ ಕಾರಣಗಳಿಗಾಗಿ ಇಸ್ರೇಲ್ ಗಾಝಾ ಕ್ಷಾಮವನ್ನು ತಡೆಯಬೇಕು: ನೆತನ್ಯಾಹು

ನೆತನ್ಯಾಹು | PC : NDTV
ಟೆಲ್ಅವೀವ್: ರಾಜತಾಂತ್ರಿಕ ಕಾರಣಗಳಿಗಾಗಿ ಗಾಝಾದಲ್ಲಿ ಕ್ಷಾಮವನ್ನು ತಡೆಯುವುದು ಇಸ್ರೇಲ್ ಗೆ ಅಗತ್ಯವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದಾರೆ.
ಪ್ರಾಯೋಗಿಕ ಮತ್ತು ರಾಜಕೀಯ ಎರಡೂ ಕಾರಣಗಳಿಗಾಗಿ ಗಾಝಾದ ಜನಸಂಖ್ಯೆ ಕ್ಷಾಮದಲ್ಲಿ ಮುಳುಗಲು ನಾವು ಬಿಡಬಾರದು. ಇಸ್ರೇಲ್ ನ ಮಿತ್ರರೂ ಕೂಡಾ ಸಾಮೂಹಿಕ ಹಸಿವಿನ ಕಲ್ಪನೆಯನ್ನು ಸಹಿಸುವುದಿಲ್ಲ ಎಂದು ನೆತನ್ಯಾಹು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಮಾರು 3 ತಿಂಗಳ ದಿಗ್ಬಂಧನವನ್ನು ಭಾಗಶಃ ತೆರವುಗೊಳಿಸುವ ನಿರ್ಧಾರವನ್ನು ಪ್ರಧಾನಿ ಸಮರ್ಥಿಸಿಕೊಂಡಿರುವುದಕ್ಕೆ ಇಸ್ರೇಲ್ ಸಚಿವ ಸಂಪುಟದ ಕಟ್ಟಾ ಬಲಪಂಥೀಯ ಸಚಿವರ ತೀವ್ರ ಟೀಕೆ ಮತ್ತು ವಿರೋಧ ಎದುರಾಗಿದೆ.
ನೆರವು ಪುನರಾರಂಭದ ಕುರಿತ ಟೀಕೆ ` ಸಹಜ' ಎಂದು ಪ್ರತಿಪಾದಿಸಿದ ಅವರು, ಇದು ಕಠಿಣ, ಆದರೆ ಅಗತ್ಯದ ನಿರ್ಧಾರವಾಗಿತ್ತು ಎಂದಿದ್ದಾರೆ. ಆದರೆ ಅಂತರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡ ಮತ್ತು ಗಾಝಾದಲ್ಲಿ ಆಹಾರ, ಶುದ್ಧ ನೀರು, ಇಂಧನ ಮತ್ತು ಔಷಧಗಳ ತೀವ್ರ ಕೊರತೆಯಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಗಳು ಎಚ್ಚರಿಕೆ ನೀಡಿರುವುದು ಇಸ್ರೇಲ್ ನಿಲುವಿನಲ್ಲಿ ಬದಲಾವಣೆಗೆ ಮೂಲ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.