ಇರಾನ್ ಜೊತೆ ಅಮೆರಿಕದ ಶಾಂತಿ ಒಪ್ಪಂದ ಏರ್ಪಟ್ಟರೂ ಹಿಝ್ಬುಲ್ಲಾ ವಿರುದ್ಧ ಯುದ್ಧ ನಿಲ್ಲದು: ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Photo: PTI)
ಟೆಲ್ ಅವೀವ್, ಮಾ.31: ಒಂದು ವೇಳೆ ಅಮೆರಿಕ ಹಾಗೂ ಇರಾನ್ ನಡುವೆ ಒಪ್ಪಂದ ಏರ್ಪಟ್ಟರೂ, ಹಿಝ್ಬುಲ್ಲಾ ಹೋರಾಟಗಾರರ ವಿರುದ್ಧ ಇಸ್ರೇಲ್ ಯುದ್ಧವನ್ನು ಮುಂದುವರಿಸಲಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಇರಾನ್ ಜೊತೆ ಶಾಂತಿ ಒಪ್ಪಂದವನ್ನು ಏರ್ಪಡಿಸುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸುತ್ತಿದ್ದರೆ, ತನ್ನ ಜೊತೆಗಾರ ಸಂಘಟನೆಗಳ ವಿರುದ್ಧ ನಡೆಯುತ್ತಿರುವ ದಾಳಿಯನ್ನು ಕೂಡ ನಿಲ್ಲಿಸಬೇಕೆಂದು ಇರಾನ್ ಆಗ್ರಹಿಸುತ್ತಿದೆ.
ಯುದ್ಧವನ್ನು ನಿಲ್ಲಿಸುವ ಬಗ್ಗೆ ಭವಿಷ್ಯದಲ್ಲಿ ಇರಾನ್ ಹಾಗೂ ಅಮೆರಿಕದ ನಡುವೆ ಒಪ್ಪಂದವೇನಾದರೂ ಏರ್ಪಟ್ಟರೂ, ಲೆಬನಾನ್ ನಲ್ಲಿ ಇಸ್ರೇಲ್ ನ ಯುದ್ಧವು ನಿಲ್ಲುವುದಿಲ್ಲವೆಂದು ನೆತನ್ಯಾಹು ಅವರು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
Next Story





