ನ್ಯೂಜೆರ್ಸಿ: ತೀವ್ರಗೊಂಡ ಕಾಡ್ಗಿಚ್ಚು; 3000ಕ್ಕೂ ಅಧಿಕ ನಿವಾಸಿಗಳ ಸ್ಥಳಾಂತರ

ಸಾಂದರ್ಭಿಕ ಚಿತ್ರ | PC : NDTV
ನ್ಯೂಯಾರ್ಕ್: ಅಮೆರಿಕದ ನ್ಯೂಜೆರ್ಸಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ತೀವ್ರಗತಿಯಲ್ಲಿ ಹರಡುತ್ತಿದ್ದು ಸಾವಿರಾರು ಎಕರೆ ಪ್ರದೇಶವನ್ನು ಸುಟ್ಟುಹಾಕಿದೆ. ಸುಮಾರು 3 ಸಾವಿರ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.
ಕಾಡ್ಗಿಚ್ಚು ಸುಮಾರು 3,200 ಎಕರೆ ಪ್ರದೇಶವನ್ನು ವ್ಯಾಪಿಸಿದ್ದು ಬುಧವಾರ ಬೆಳಗ್ಗಿನವರೆಗೆ ಕೇವಲ 10%ದಷ್ಟನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗಿದೆ. ಅಗ್ನಿಶಾಮಕ ಯಂತ್ರಗಳು, ಬುಲ್ಡೋಝರ್ಗಳ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ಕಾಡ್ಗಿಚ್ಚನ್ನು ನಿಯಂತ್ರಿಸಲು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ನ್ಯೂಜೆರ್ಸಿ ಅರಣ್ಯ ಇಲಾಖೆ ಹೇಳಿದೆ.
ಸುಮಾರು 25,000 ಗ್ರಾಹಕರಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ನ್ಯೂಜೆರ್ಸಿಯ ಪ್ರಮುಖ ಹೆದ್ದಾರಿ ಗಾರ್ಡನ್ ಸ್ಟೇಟ್ ಪಾರ್ಕ್ವೇಯ ಒಂದು ಭಾಗವನ್ನು ಮುಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





