“ನಾಗರಿಕರ ಹತ್ಯೆ, ಹೊಸ ಯುದ್ದವನ್ನು ಅಮೆರಿಕದ ಜನ ಬಯಸುವುದಿಲ್ಲ” : ಇರಾನ್ ಮೇಲಿನ ದಾಳಿಗೆ ವಿರೋಧ ವ್ಯಕ್ತಪಡಿಸಿದ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ

ಝೊಹ್ರಾನ್ ಮಮ್ದಾನಿ | Photo Credit : AP \ PTI
ನ್ಯೂಯಾರ್ಕ್ ; ಇರಾನ್ ಮೇಲಿನ ಅಮೆರಿಕ- ಇಸ್ರೇಲ್ ಜಂಟಿ ದಾಳಿಯನ್ನು ವಿರೋಧಿಸಿದ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ, ನಾಗರಿಕರ ಹತ್ಯೆ, ಹೊಸ ಯುದ್ದವನ್ನು ಅಮೆರಿಕದ ಜನ ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಝೊಹ್ರಾನ್ ಮಮ್ದಾನಿ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ದಾಳಿ ಅನ್ಯಾಯಕರ ಆಕ್ರಮಣ ಯುದ್ಧದ ಭೀಕರ ವಿಸ್ತರಣೆಯನ್ನು ಸೂಚಿಸುತ್ತವೆ. ನಗರಗಳ ಮೇಲೆ ಬಾಂಬ್ ದಾಳಿ, ನಾಗರಿಕರ ಹತ್ಯೆ, ಹೊಸ ಯುದ್ಧರಂಗವನ್ನು ಅಮೆರಿಕದ ಜನರು ಬಯಸುವುದಿಲ್ಲ. ಆಡಳಿತದ ಬದಲಾವಣೆಗಾಗಿ ಅವರು ಯಾವುದೇ ಯುದ್ಧವನ್ನು ಬಯಸುವುದಿಲ್ಲ. ಅವರು ಹಣದುಬ್ಬರದ ಬಿಕ್ಕಟ್ಟಿನಿಂದ ಪರಿಹಾರವನ್ನು ಬಯಸುತ್ತಾರೆ. ಅವರು ಶಾಂತಿಯನ್ನು ಬಯಸುತ್ತಾರೆ ಎಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
ನ್ಯೂಯಾರ್ಕ್ನ ಪ್ರತಿಯೊಬ್ಬರು ಕೂಡ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನಾನು ಗಮನಹರಿಸಿದ್ದೇನೆ. ನಮ್ಮ ಪೊಲೀಸ್ ಆಯುಕ್ತರು ಹಾಗೂ ತುರ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಮುನ್ನೆಚ್ಚರಿಕೆಯ ಭಾಗವಾಗಿ ಇಲಾಖೆಗಳ ನಡುವಿನ ಸಮನ್ವಯತೆಯನ್ನು ಹೆಚ್ಚಿಸುವುದು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ಹೆಚ್ಚಿಸುವುದು ಸೇರಿದಂತೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
ನಾನು ನೇರವಾಗಿ ಇರಾನ್ ಮೂಲದ ನ್ಯೂಯಾರ್ಕ್ ನಿವಾಸಿಗಳೊಂದಿಗೆ ಮಾತನಾಡಲು ಬಯಸುತ್ತೇನೆ. ನೀವು ಈ ನಗರದ ಅವಿಭಾಜ್ಯ ಭಾಗವಾಗಿದ್ದೀರಿ. ನೀವು ನಮ್ಮ ನೆರೆಹೊರೆಯವರು, ಸಣ್ಣ ವ್ಯಾಪಾರಿಗಳು, ವಿದ್ಯಾರ್ಥಿಗಳು, ಕಲಾವಿದರು, ಕಾರ್ಮಿಕರು ಹಾಗೂ ಸಮುದಾಯದ ನಾಯಕರಾಗಿದ್ದೀರಿ. ನ್ಯೂಯಾರ್ಕ್ ನಲ್ಲಿ ನೀವು ಸುರಕ್ಷಿತರಾಗಿರುವಿರಿ ಎಂದು ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
Today’s military strikes on Iran — carried out by the United States and Israel — mark a catastrophic escalation in an illegal war of aggression. Bombing cities. Killing civilians. Opening a new theater of war. Americans do not want this. They do not want another war in pursuit…
— Mayor Zohran Kwame Mamdani (@NYCMayor) February 28, 2026






