ಭಾರತೀಯರ ಇ-ಮೇಲ್ಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ: ನ್ಯೂಝಿಲ್ಯಾಂಡ್ ಸಚಿವೆಯ ವಿವಾದಾತ್ಮಕ ಹೇಳಿಕೆ

ಎರಿಕಾ ಸ್ಟ್ಯಾನ್ಫೋರ್ಡ್ | PC : NDTV
ವೆಲಿಂಗ್ಟನ್: ಭಾರತೀಯರಿಂದ ವಲಸೆಯ ಬಗ್ಗೆ ಮಾಹಿತಿ ಕೋರಿ ಬರುವ ಇ-ಮೇಲ್ಗಳನ್ನು ತಾನು ಗಮನಿಸುವುದೇ ಇಲ್ಲ. ಅವುಗಳನ್ನು `ಅಪ್ರಸ್ತುತ' ಎಂದು ಪರಿಗಣಿಸಿ ಪ್ರತಿಕ್ರಿಯಿಸುವುದಿಲ್ಲ ಎಂದು ನ್ಯೂಝಿಲ್ಯಾಂಡ್ ನ ಸಚಿವೆಯೊಬ್ಬರು ನೀಡಿರುವ ಹೇಳಿಕೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ನ್ಯೂಝಿಲ್ಯಾಂಡ್ ನ ವಲಸೆ ಸಚಿವೆ ಎರಿಕಾ ಸ್ಟ್ಯಾನ್ಫೋರ್ಡ್ ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಎದುರಾದ ಪ್ರಶ್ನೆಗೆ ಈ ರೀತಿ ಉತ್ತರಿಸಿರುವುದಾಗಿ ವರದಿಯಾಗಿದೆ. ತನ್ನ ಜಿಮೈಲ್ ಖಾತೆಯನ್ನು ಅಧಿಕೃತ ಪತ್ರವ್ಯವಹಾರಕ್ಕೆ ಬಳಸುವುದನ್ನು ಸಮರ್ಥಿಸಿಕೊಂಡ ಸಚಿವೆ `ನಾನು ಬಹಳಷ್ಟು ಅನಪೇಕ್ಷಿತ ಇ-ಮೇಲ್ಗಳನ್ನು ಸ್ವೀಕರಿಸುತ್ತೇನೆ, ಉದಾಹರಣೆಗೆ ಭಾರತೀಯರಿಂದ ವಲಸೆ ಸಲಹೆಯನ್ನು ಕೇಳುವ ವಿಷಯಗಳು, ಇವುಗಳಿಗೆ ನಾನು ಉತ್ತರಿಸುವುದೇ ಇಲ್ಲ. ಇವನ್ನು ಅಪ್ರಸ್ತುತ ಎಂದು ಪರಿಗಣಿಸುತ್ತೇನೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಸಚಿವೆಯ ಹೇಳಿಕೆಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದೆ.
Next Story







