ಇಸ್ರೇಲ್ ಜತೆಗಿನ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ: ಜೋರ್ಡನ್

Photo : NDTV
ಅಮಾನ್ : ಗಾಝಾದಲ್ಲಿ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲ್ ಜತೆಗಿನ ನೀರು ಮತ್ತು ಇಂಧನ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಜೋರ್ಡನ್ ಹೇಳಿದೆ.
ʼಈ ಒಪ್ಪಂದಕ್ಕೆ ಅಕ್ಟೋಬರ್ ನಲ್ಲಿ ಸಹಿ ಹಾಕಬೇಕಿತ್ತು. ಆದರೆ ನಾವು ಸಹಿ ಹಾಕದಿರಲು ನಿರ್ಧರಿಸಿದ್ದೇವೆ' ಎಂದು ಜೋರ್ಡನ್ನ ವಿದೇಶಾಂಗ ಸಚಿವ ಅಯ್ಮನ್ ಸಫಾದಿಯನ್ನು ಉಲ್ಲೇಖಿಸಿ ಅಲ್ಜಝೀರಾ ಗುರುವಾರ ವರದಿ ಮಾಡಿದೆ.
`ಇಸ್ರೇಲ್ ಈ ಸಂಪೂರ್ಣ ವಲಯವನ್ನು ನರಕದೆಡೆಗೆ ಕೊಂಡೊಯ್ಯುತ್ತಿದೆ. ಗಾಝಾ ಪ್ರದೇಶದಲ್ಲಷ್ಟೇ ಅಲ್ಲ, ಪಶ್ಚಿಮ ದಂಡೆ, ಲೆಬನಾನ್ ಗಡಿಭಾಗದಲ್ಲೂ ಉದ್ವಿಗ್ನತೆ ಹೆಚ್ಚಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇಸ್ರೇಲ್ನ ಕೃತ್ಯಗಳು ಸಹಜ ಸ್ಥಿತಿ ಮತ್ತು ಶಾಂತಿಯುತ ಸಂದರ್ಭಕ್ಕೆ ಅಡ್ಡಿಯಾಗುವ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಿದೆ. ಹಿಂಸಾಚಾರ ಮುಂದುವರಿದಿರುವಾಗ ಜೋರ್ಡನ್-ಇಸ್ರೇಲ್ ಶಾಂತಿ ಒಪ್ಪಂದ ಅಪ್ರಸ್ತುತವಾಗಿದೆ' ಎಂದವರು ಹೇಳಿದ್ದಾರೆ.
Next Story





