ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ
![ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ](https://www.varthabharati.in/h-upload/2024/04/03/1258221-40059509-7c55-43ce-b72d-1febfb655899.webp)
Photo : X/@GWR
ಕರಾಕಸ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದು ಗಿನ್ನೆಸ್ ವಿಶ್ವದಾಖಲೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ ವೆನೆಝುವೆಲಾದ ಜುವಾನ್ ವಿಸೆಂಟೆ ಪೆರೆಝ್ ಮೊರ 114ನೇ ವಯಸ್ಸಿನಲ್ಲಿ ನಿಧನರಾಗಿರುವುದಾಗಿ ಅವರ ಬಂಧುಗಳು ಮಾಹಿತಿ ನೀಡಿದ್ದಾರೆ.
ಜೀವಂತವಾಗಿರುವ ವಿಶ್ವದ ಅತೀ ಹಿರಿಯ ವ್ಯಕ್ತಿಯೆಂದು ಪೆರೆಝ್ರನ್ನು 2022ರ ಫೆಬ್ರವರಿ 4ರಂದು ಗಿನ್ನೆಸ್ ವಿಶ್ವದಾಖಲೆ ಅಧಿಕೃತವಾಗಿ ದೃಢಪಡಿಸಿತ್ತು. ಆಗ ಪೆರೆಝ್ 112 ವರ್ಷ 253 ದಿನ ವಯಸ್ಸಿನವರಾಗಿದ್ದರು. 2022ರಲ್ಲಿ ಇವರಿಗೆ 11 ಮಕ್ಕಳು, 41 ಮೊಮ್ಮಕ್ಕಳು, 18 ಮರಿಮೊಮ್ಮಕ್ಕಳು ಇದ್ದರು. ಆಂಡಿಯಾನ್ ರಾಜ್ಯದ ಎಲ್ಕೋಬ್ರೆ ನಗರದಲ್ಲಿ 1909ರ ಮೇ 27ರಂದು ಜನಿಸಿದ್ದ ಪೆರೆಝ್ ಕೃಷಿಕನಾಗಿದ್ದರು.
Next Story