ಬ್ರಿಟನ್ | ಭಾರತೀಯ ಮೂಲದ ಮಹಿಳೆಯ ಇರಿದು ಹತ್ಯೆ
![ಬ್ರಿಟನ್ | ಭಾರತೀಯ ಮೂಲದ ಮಹಿಳೆಯ ಇರಿದು ಹತ್ಯೆ ಬ್ರಿಟನ್ | ಭಾರತೀಯ ಮೂಲದ ಮಹಿಳೆಯ ಇರಿದು ಹತ್ಯೆ](https://www.varthabharati.in/h-upload/2024/05/15/1266772-case.webp)
ಲಂಡನ್ : ವಾಯವ್ಯ ಲಂಡನ್ನಲ್ಲಿ ಬಸ್ ನಿಲ್ದಾಣದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಎಜ್ವೇರ್ ಪ್ರದೇಶದ ಬರ್ನ್ಓಕ್ ಬ್ರಾಡ್ವೇ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿತಾ ಮುಖೆ(66 ವರ್ಷ)ಯನ್ನು ಆರೋಪಿ ಜಲಾಲ್ ಡೆಬೆಲ್ಲಾ ಎದೆ ಮತ್ತು ಕುತ್ತಿಗೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆರೋಪಿಯನ್ನು ಉತ್ತರ ಲಂಡನ್ನ ಕಾಲಿಂಡೇಲ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಮೃತ ಮಹಿಳೆ ಲಂಡನ್ನ ರಾಷ್ಟ್ರೀಯ ಆರೋಗ್ಯ ಇಲಾಖೆಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದರು ಎಂದು ಬ್ರಿಟನ್ ಪೊಲೀಸರು ಹೇಳಿದ್ದಾರೆ.
Next Story