`ಬ್ರಿಕ್ಸ್' ಸೇರ್ಪಡೆಗೆ ಶ್ರೀಲಂಕಾ ಆಸಕ್ತಿ
ಕೊಲಂಬೊ: ಬ್ರಿಕ್ಸ್ ಗುಂಪಿಗೆ ಶ್ರೀಲಂಕಾ ಸೇರ್ಪಡೆಗೊಳ್ಳಲು ಉತ್ಸುಕವಾಗಿದೆ ಎಂದು ಆ ದೇಶದ ವಿದೇಶಾಂಗ ಸಚಿವ ಅಲಿ ಸಬ್ರಿ ಹೇಳಿದ್ದಾರೆ.
ಭಾರತವು ಸದಸ್ಯನಾದ ಬಳಿಕ `ಬ್ರಿಕ್ಸ್' ಒಂದು ಉತ್ತಮ ಸಂಸ್ಥೆಯಾಗಿದೆ. ಭಾರತದ ನೆರವಿನಿಂದ ಬ್ರಿಕ್ಸ್ ಗೆ ಸೇರ್ಪಡೆಯಾಗಲು ನಾವು ಬಯಸಿದ್ದೇವೆ. ಈ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ವರದಿ ನೀಡಲು ಉಪಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ವರದಿ ಕೈಸೇರಿದ ಬಳಿಕ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
Next Story