ಜಬಾಲಿಯಾದ ಆಸ್ಪತ್ರೆಗೆ ಇಸ್ರೇಲ್ ಸೇನೆಯ ದಿಗ್ಬಂಧನ | ಸಂಕಷ್ಟದಲ್ಲಿ ನೂರಾರು ಗಾಯಾಳುಗಳು, ರೋಗಿಗಳು
ಗಾಝಾ: ಉತ್ತರ ಗಾಝಾದ ಜಬಾಲಿಯಾದಲ್ಲಿರುವ ಅಲ್ ಅವ್ದಾ ಆಸ್ಪತ್ರೆಗೆ ಇಸ್ರೇಲ್ನ ಸಶಸ್ತ್ರ ಪಡೆಗಳು ಮತ್ತೆ ದಿಗ್ಭಂಧನ ವಿಧಿಸಿವೆ. ಮೇ 19ರಿಂದ ಆಸ್ಪತ್ರೆಯನು ಸುತ್ತುವರಿದಿರುವ ಇಸ್ರೇಲ್ ಸೈನಿಕರು, ರೋಗಿಗಳನ್ನು, ಗಾಯಾಳುಗಳನ್ನು ತಡೆಯುತ್ತಿರುವುದಾಗಿ ವರದಿಯಾಗಿವೆ.
ಇಸ್ರೇಲ್ ಸೇನೆಯ ದಿಗ್ಬಂಧನದಿಂದಾಗಿ ಆಸ್ಪತ್ರೆಯೊಳಗಡೆ 97 ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸುಮಾರು 150 ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಸಿಕ್ಕಿಹಾಕಿಕೊಂಡಿದ್ದಾರೆ. ಆ್ಯಂಬುಲೆನ್ಸ್ಗಳಿಗೆ ಆಸ್ಪತ್ರೆಯಿಂದ ಹೊರಗೆ ಚಲಿಸಲು ಅಸಾಧ್ಯವಾಗಿದ್ದು, ಇಸ್ರೇಲ್ ಸೇನೆಯ ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ತರಲು ಸಾಧ್ಯವಾಗುತ್ತಿಲ್ಲ. ಗಾಝಾದ ಮೇಲೆ ಇಸ್ರೇಲ್ ಆಕ್ರಮಣ, ಅಲ್ಅವ್ದಾ ಆಸ್ಪತ್ರೆಯೊಂದರಲ್ಲಿ ಎಲುಬಿಗೆ ಸಂಬಂಧಿಸಿದ ತೊಂದರೆಗಳಿಗೆ ಸಶ್ತ್ರಕ್ರಿಯೆಗಳನ್ನು ನಡಸಲಾಗುತ್ತಿದೆ. ಗಾಝಾ ಸಂಘರ್ಷದ ಗಾಯಾಳುಗಳಲ್ಲಿ ಶೇ.80ರಷ್ಟು ಮಂದಿಗೆ ಎಲುಬಿನ ಮುರಿತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅವುಗಳಿಗೆ ಶಸ್ತ್ರಕ್ರಿಯೆಯ ಅಗತ್ಯವಿದೆ ಎಂದು ಅಲ್ ಅವ್ದಾ ಆಸ್ಪತ್ರೆಯ ಕಾರ್ಯನಿರತ ನಿರ್ದೇಶಕ ಮೊಹಮ್ಮದ್ ಸಾಲ್ಹಾ ತಿಳಿಸಿದ್ದಾರೆ