ರಶ್ಯ| ಇಬ್ಬರು ಉನ್ನತ ರಕ್ಷಣಾ ಅಧಿಕಾರಿಗಳ ಬಂಧನ

ಮಾಸ್ಕೋ : ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದಲ್ಲಿ ಸೇನೆಯ ಉನ್ನತ ಅಧಿಕಾರಿ ಮತ್ತು ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಯನ್ನು ಬಂಧಿಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.
ರಕ್ಷಣಾ ಸಿಬ್ಬಂದಿ ವಿಭಾಗದ ಸಹಾಯಕ ಮುಖ್ಯಸ್ಥ ವ್ಯಾದಿಮ್ ಶಮಾರಿನ್ ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿ ವ್ಲಾದಿಮಿರ್ ವೆಟೆಲೆಟ್ಸ್ಕಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು ವಿಚಾರಣೆ ಪೂರ್ವ ಬಂಧನದಲ್ಲಿ ಇಡಲಾಗಿದೆ. ಆರೋಪ ಸಾಬೀತಾದರೆ ಗರಿಷ್ಟ 15 ವರ್ಷಗಳ ಜೈಲುಶಿಕ್ಷೆಗೆ ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





