ಪಾಕಿಸ್ತಾನ | ಧರ್ಮನಿಂದನೆ ಆರೋಪ, ವ್ಯಕ್ತಿಯನ್ನು ಥಳಿಸಿ ಮನೆಗೆ ಬೆಂಕಿ ಹಚ್ಚಿದ ಗುಂಪು

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತದ ಸರ್ಗೋದ ನಗರದಲ್ಲಿ ಧರ್ಮನಿಂದನೆಯ ಆರೋಪದಲ್ಲಿ ಗುಂಪೊಂದು ಕ್ರಿಶ್ಚಿಯನ್ ವ್ಯಕ್ತಿಯನ್ನು ಥಳಿಸಿ ಆತನ ಮನೆ ಮತ್ತು ಫ್ಯಾಕ್ಟರಿಗೆ ಬೆಂಕಿ ಹಚ್ಚಿದ ಪ್ರಕರಣ ವರದಿಯಾಗಿದೆ.
ಧರ್ಮನಿಂದನೆ ಮಾಡಿರುವ ಶಂಕಿತ ಆರೋಪಿ ಕ್ರಿಶ್ಚಿಯನ್ ವ್ಯಕ್ತಿಯ ಮನೆಗೆ ನುಗ್ಗಿದ ಗುಂಪು ಆತನನ್ನು ಥಳಿಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿ ಮನೆಗೆ ಬೆಂಕಿ ಹಚ್ಚಿದೆ. ಬೆಂಕಿಯ ಜ್ವಾಲೆ ಪಕ್ಕದಲ್ಲಿದ್ದ ಶೂ ಫ್ಯಾಕ್ಟರಿಗೂ ಹರಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ರಕ್ಷಿಸಿದ್ದಾರೆ ಎಂದು ಜಿಯೊ ಟಿವಿ ವರದಿ ಮಾಡಿದೆ.
ಹಲ್ಲೆ ನಡೆಸಿದ ಗುಂಪು, ಬೆಂಕಿ ನಂದಿಸದಂತೆ ಅಗ್ನಿಶಾಮಕ ದಳದವರಿಗೆ ಬೆದರಿಕೆ ಒಡ್ಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Next Story





