ಯುರೋಪ್ನಾದ್ಯಂತ ದಡಾರ ಪ್ರಕರಣಗಳಲ್ಲಿ ಭಾರೀ ಏರಿಕೆ
![ಯುರೋಪ್ನಾದ್ಯಂತ ದಡಾರ ಪ್ರಕರಣಗಳಲ್ಲಿ ಭಾರೀ ಏರಿಕೆ ಯುರೋಪ್ನಾದ್ಯಂತ ದಡಾರ ಪ್ರಕರಣಗಳಲ್ಲಿ ಭಾರೀ ಏರಿಕೆ](https://www.varthabharati.in/h-upload/2024/05/29/1269309-dadara.webp)
ಸಾಂದರ್ಭಿಕ ಚಿತ್ರ
ಕೋಪನ್ಹೇಗನ್ : ಯುರೋಪ್ನಾದ್ಯಂತ ದಡಾರ ಸೋಂಕಿನ ಪ್ರಕರಣಗಳಲ್ಲಿ ಸತತ ಎರಡನೆ ವರ್ಷವೂ ಏರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ 2023ರಲ್ಲಿ ದಾಖಲಾದ ದಡಾರದ ಪ್ರಕರಣಗಳ ಸಂಖ್ಯೆಯನ್ನು ಮೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಎಚ್ಚರಿಕೆ ನೀಡಿದೆ.
ದಡಾರ ಸೋಂಕಿನ ವಿರುದ್ಧ ಲಸಿಕೀಕರಣ ಅಭಿಯಾನವನ್ನು ಉತ್ತೇಜಿಸುವಂತೆ ಅದು ಯುರೋಪ್ನ ರಾಷ್ಟ್ರಗಳಿಗೆ ಕರೆ ನೀಡಿದೆ.
ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿಮಧ್ಯ ಏಶ್ಯ ಸೇರಿದಂತೆ ಯುರೋಪ್ ಖಂಡದ 53 ರಾಷ್ಟ್ರಗಳ ಪೈಕಿ 41 ದೇಶಗಳಲ್ಲಿ ಒಟ್ಟು 56,634 ದಡಾರ ಪ್ರಕರಣಗಳು ವರದಿಯಾಗಿದ್ದು ನಾಲ್ಕು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 2023ರಲ್ಲಿ ವರದಿಯಾದ ದಡಾರ ಒಟ್ಟು ಪ್ರಕರಣಗಳ ಒಟ್ಟು ಸಂಖ್ಯೆಯು ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಕೇವಲ ಐದು ಸಾವಿರದಷ್ಟು ಕಡಿಮೆಯೆಂದು ವಿಶ್ವಸಂಸ್ಥೆ ಹೇಳಿದೆ. 2022ರಲ್ಲಿ 941 ಪ್ರಕರಣಗಳಷ್ಟೇ ವರದಿಯಾಗಿದ್ದರೆ, ಈ ವರ್ಷ ಅದಕ್ಕಿಂತ 60 ಪಟ್ಟು ಅಧಿಕ ದಡಾರದ ಪ್ರಕರಣಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ.
ಯುರೋಪ್ನಾದ್ಯಂತ ಈ ವರ್ಷ ದಡಾರದ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. 2023ನೇ ಇಸವಿಯುದ್ದಕ್ಕೂ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಅವು ಮೀರಿಸಲಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸೋಂಕು ನಿರೋಧಕ ಲಸಿಕೆಯನ್ನು ಸಾರ್ವತ್ರಿಕವಾಗಿ ನೀಡುವುದು ವೆಚ್ಚದಾಯಕವಾದರೂ, ಸಮಾಜದ ಮೇಲೆ ವೈರಸ್ ಮೇಲುಗೈಯನ್ನು ಸಾಧಿಸುವುದನ್ನು ತಡೆಯಲು ಅದರಿಂದ ತಡೆಯಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಘಟಕದ ನಿರ್ದೇಶಕ ಹ್ಯಾನ್ಸ್ ಕ್ಲಜ್ ತಿಳಿಸಿದ್ದಾರೆ.
ದಡಾರವು ವೈರಸ್ನಿಂದ ಉಂಟಾಗುತ್ತದೆ. ಸೋಂಕು ಪೀಡಿತರು ಉಸಿರಾಡುವ, ಕೆಮ್ಮಿದಾಗ ಅಥವಾ ಸೀನಿದಾಗ ಅದು ಇತರರಿಗೆ ಹರಡುತ್ತದೆ. ಮಕ್ಕಳಲ್ಲಿ ಈ ಸೋಂಕು ಸಾಮಾನ್ಯವಾದರೂ, ಅದು ಯಾರಿಗೂ ಕೂಡಾ ಹರಡಬಹುದಾಗಿದೆ ಎಂದು ಡಬ್ಲ್ಯುಎಚ್ಓ ಹೇಳಿಕೆ ತಿಳಿಸಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.