ದಕ್ಷಿಣ ಆಫ್ರಿಕಾ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆ?
ಸಾಂದರ್ಭಿಕ ಚಿತ್ರ | PC : aljazeera.com
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್ಸಿ) ಪಕ್ಷ ಬಹುಮತ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.
ಇದುವರೆಗೆ 61.2% ಮತದಾನ ಕೇಂದ್ರಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು ಅಧ್ಯಕ್ಷ ಸಿರಿಲ್ ರಮಫೋಸ ನೇತೃತ್ವದ ಎಎನ್ಸಿ 41.9%ದಷ್ಟು ಮತಗಳನ್ನು ಮಾತ್ರ ಪಡೆದಿದ್ದು 1994ರ ಬಳಿಕ ಪ್ರಥಮ ಬಾರಿಗೆ ಬಹುಮತ ಕಳೆದುಕೊಳ್ಳುವ ಅಪಾಯದಲ್ಲಿದೆ ಎಂದು ವರದಿಯಾಗಿದೆ.
Next Story