ರಶ್ಯ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ವಿದ್ಯುತ್ ಸ್ಥಾವರಕ್ಕೆ ಹಾನಿ: ಇಬ್ಬರು ಸಿಬಂದಿಗಳಿಗೆ ಗಾಯ
ಸಾಂದರ್ಭಿಕ ಚಿತ್ರ
ಕೀವ್: ಆಗ್ನೇಯ ಮತ್ತು ಪಶ್ಚಿಮ ಉಕ್ರೇನ್ನಲ್ಲಿ ಇಂಧನ ವ್ಯವಸ್ಥೆಗಳನ್ನು ಗುರಿಯಾಗಿಸಿ ಶನಿವಾರ ರಶ್ಯ ಕ್ಷಿಪಣಿ ಮತ್ತು ಡ್ರೋನ್ಗಳ ಮಳೆಗರೆದಿದ್ದು ವಿದ್ಯುತ್ ಸ್ಥಾವರಗಳಿಗೆ ತೀವ್ರ ಹಾನಿಯಾಗಿದೆ. ಇಬ್ಬರು ಸಿಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಯ ಬಳಿಕ ವಿದ್ಯುತ್ ಪೂರೈಕೆ ಮೊಟಕುಗೊಂಡಿದ್ದು ದಾಖಲೆ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆಗ್ನೇಯ ಉಕ್ರೇನ್ನಲ್ಲಿ ಝಪೋರಿಝಿಯಾ ಪ್ರಾಂತ ಮತ್ತು ಪಶ್ಚಿಮದ ಲಿವಿವ್ನಲ್ಲಿನ ವಿದ್ಯುತ್ ವ್ಯವಸ್ಥೆಗಳಿಗೆ ವ್ಯಾಪಕ ಹಾನಿಯಾಗಿದೆ. ಝಪೋರಿಝಿಯಾ ಸ್ಥಾವರದ ಇಬ್ಬರು ಸಿಬಂದಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಉಕ್ರೇನ್ನಲ್ಲಿ ಅನಿಲ ಮೌಲಸೌಕರ್ಯ ವ್ಯವಸ್ಥೆಗೂ ಹಾನಿಯಾಗಿದೆ ಎಂದು ಉಕ್ರೇನ್ನ ರಾಷ್ಟ್ರೀಯ ಗ್ರಿಡ್ ನಿರ್ವಾಹಕ `ಉಕ್ರೆನೆರ್ಗೊ' ಹೇಳಿದೆ. ಮಾರ್ಚ್ನಿಂದ ಶತ್ರುಗಳ ಪಡೆ ವಿದ್ಯುತ್ ವ್ಯವಸ್ಥೆಯ ಮೇಲೆ 8 ಬಾರಿ ಬೃಹತ್ ದಾಳಿ ನಡೆಸಿರುವುದರಿಂದ ಇಂಧನ ಕ್ಷೇತ್ರದಲ್ಲಿ ಸಮಸ್ಯೆ ಹೆಚ್ಚಿದೆ ಎಂದು ಉಕ್ರೇನ್ನ ಇಂಧನ ಸಚಿವಾಲಯ ಹೇಳಿದೆ.
ಉಕ್ರೇನ್ನ ಮಿಲಿಟರಿ ಉತ್ಪಾದನೆಗೆ ನೆರವಾಗುತ್ತಿದ್ದ ಶಸ್ತ್ರಾಸ್ತ್ರ ಡಿಪೊಗಳು ಹಾಗೂ ಇಂಧನ ವ್ಯವಸ್ಥೆಗಳನ್ನು ಗುರಿಯಾಗಿಸಿ ಯುದ್ಧವಿಮಾನ ಮತ್ತು ಸಮರನೌಕೆಗಳ ಮೂಲಕ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೇಲೆ ನಡೆಸಿದ ದಾಳಿ ಯಶಸ್ವಿಯಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.