ಗಾಝಾದಲ್ಲಿ ಸ್ಥಳಾಂತರ ಆದೇಶ ನೀಡಿದ ಇಸ್ರೇಲ್ ; ವಿಶ್ವಸಂಸ್ಥೆ ನೆರವು ಕಾರ್ಯಾಚರಣೆಗೆ ಅಡ್ಡಿ : ವರದಿ
ಸಾಂದರ್ಭಿಕ ಚಿತ್ರ (PTI)
ವಿಶ್ವಸಂಸ್ಥೆ : ಕೇಂದ್ರ ಗಾಝಾ ಪಟ್ಟಿಯಲ್ಲಿರುವ ಡೀರ್ ಎಲ್-ಬಲಾಹ್ನಗ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ನೀಡಿರುವ ಹೊಸ ಆದೇಶದಿಂದಾಗಿ ಗಾಝಾದಲ್ಲಿ ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಸ್ಥಗಿತಗೊಳಿಸುವ ಅನಿವಾರ್ಯ ಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಗಾಝಾದಲ್ಲಿ ಈಗ ನೆಲೆಸಿರುವ ಪರಿಸ್ಥಿತಿಯಿಂದಾಗಿ ನೆರವು ವಿತರಿಸಲು ಸಾಧ್ಯವಾಗುತ್ತಿಲ್ಲ. ಮೇ ತಿಂಗಳಲ್ಲಿ ದಕ್ಷಿಣ ಗಾಝಾದ ರಫಾ ನಗರದಿಂದ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಆದೇಶ ನೀಡಿದ ಬಳಿಕ ಗಾಝಾ ಪಟ್ಟಿಯಲ್ಲಿ ತನ್ನ ಮುಖ್ಯ ಕಾರ್ಯಾಚರಣೆಗಳನ್ನು ಮತ್ತು ಹೆಚ್ಚಿನ ಸಿಬ್ಬಂದಿಗಳನ್ನು ಡೀರ್ ಎಲ್-ಬಲಾಹ್ಗೆಯ ಸ್ಥಳಾಂತರಿಸಿದೆ. ಈಗ ನಾವೀಗ ಎಲ್ಲಿಗೆ ತೆರಳಬೇಕು ಎಂದು ತಿಳಿಯುತ್ತಿಲ್ಲ. ಸ್ಥಳಾಂತರಗೊಳ್ಳಲು ಹೆಚ್ಚಿನ ಸಮಯಾವಕಾಶ ಇಲ್ಲದ ಕಾರಣ ನಮ್ಮ ಉಪಕರಣಗಳು ಬಾಕಿ ಉಳಿದಿವೆ. ನಾವು ಗಾಝಾವನ್ನು ತೊರೆಯುವುದಿಲ್ಲ, ಯಾಕೆಂದರೆ ಜನತೆಗೆ ನಾವು ಅಲ್ಲಿರುವ ಅಗತ್ಯವಿದೆ. ವಿಶ್ವಸಂಸ್ಥೆ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯ ಅಗತ್ಯದೊಂದಿಗೆ ಜನಸಮುದಾಯದ ಅಗತ್ಯವನ್ನು ಸಮತೋಲನಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.
`ಫೆಲೆಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ (ಯುಎನ್ಆೆರ್ಡವಬ್ಲ್ಯೂಎ) ತನ್ನ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿದೆ. ಯಾಕೆಂದರೆ ಅದು ಜನಸಮುದಾಯದೊಂದಿಗೆ ಬೆರೆತಿದೆ' ಎಂದು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡ್ಯುಜರಿಕ್ ಸ್ಪಷ್ಟಪಡಿಸಿದ್ದಾರೆ. ಅಧಿಕಾರಿ ವಿವರಿಸಿದ ಸಮಸ್ಯೆ ಫೆಲೆಸ್ತೀನ್ ಪ್ರದೇಶದಾದ್ಯಂತ ನೆರವು ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ. ಜನರು ಇರುವವರೆಗೆ, ಮತ್ತು ಅವರಿಗೆ ನೆರವು ವಿತರಿಸಲು ಸಾಧ್ಯವಾಗುವವರೆಗೆ ನೆರವು ವಿತರಣೆಯಾಗಲಿದೆ ಎಂದವರು ಹೇಳಿದ್ದಾರೆ.
ಕೇಂದ್ರ ಗಾಝಾದಲ್ಲಿ ಇಸ್ರೇಲ್ ಸೇನೆಯ ಪುನರಾವರ್ತಿತ ಸ್ಥಳಾಂತರ ಆದೇಶವು ವಿಶ್ವಸಂಸ್ಥೆಯ ಮಾನವೀಯ ನೆರವು ಕಾರ್ಯಾಚರಣೆಗೆ ತೊಡಕಾಗಿದೆ. ಅಲ್-ಮವಾಸಿಯಲ್ಲಿನ ಸುರಕ್ಷಿತ ಪ್ರದೇಶಕ್ಕೆ 90 ಸಿಬ್ಬಂದಿಗಳನ್ನು ಸ್ಥಳಾಂತರಿಸಲಾಗಿದೆ. 140 ಅಂತರರಾಷ್ಟ್ರೀಯ ಸಿಬ್ಬಂದಿ ಮನೆಗಳನ್ನು ಹುಡುಕಲು ಪ್ರಯಾಸ ಪಡುತ್ತಿದ್ದಾರೆ. ಕೆಲವರು ಕಾರಿನಲ್ಲಿಯೇ ನಿದ್ದೆ ಮಾಡುವ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ಅಲ್ಜದಝೀರಾ ವರದಿ ಮಾಡಿದೆ.
► ಆಹಾರ ವಿತರಣೆಗೆ ಅಡ್ಡಿ
ಇಸ್ರೇಲ್ನಆ ಪುನರಾವರ್ತಿತ ಸ್ಥಳಾಂತರ ಆದೇಶದಿಂದ ಗಾಝಾದಲ್ಲಿರುವ ತನ್ನ ಆಹಾರ ವಿತರಣಾ ಕೇಂದ್ರಗಳು ಮತ್ತು ಸಮುದಾಯ ಅಡುಗೆ ಮನೆಗಳ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಆಹಾರ ಯೋಜನೆ(ಡಬ್ಲ್ಯೂಎಫ್ಪಿನ) ಹೇಳಿದೆ.
ತೀವ್ರಗೊಳ್ಳುತ್ತಿರುವ ಸಂಘರ್ಷ, ಸೀಮಿತ ಸಂಖ್ಯೆಯ ಗಡಿ ದಾಟುವಿಕೆ ಮತ್ತು ಹಾನಿಗೊಳಗಾದ ರಸ್ತೆಗಳಿಂದ ಜಾಗತಿಕ ಆಹಾರ ಯೋಜನೆಯ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ, ಸಹಾಯದ ಒಳಹರಿವು ಕುಸಿದಿದ್ದರಿಂದ ಮತ್ತು ಸರಬರಾಜು ಕ್ಷೀಣಿಸಿದ್ದರಿಂದ ಗಾಝಾದಲ್ಲಿ ವಿತರಿಸುವ ಆಹಾರ ಪೊಟ್ಟಣಗಳ ಪ್ರಮಾಣದಲ್ಲಿ ಕಡಿತಗೊಳಿಸಬೇಕಾಗಿದೆ' ಎಂದು ಡಬ್ಲ್ಯೂಎಪಿ ಮೂಲಗಳು ಹೇಳಿವೆ.