ನೈಜೀರಿಯಾ: ಗ್ಯಾಸೊಲಿನ್ ಟ್ಯಾಂಕರ್ ಸ್ಫೋಟದಲ್ಲಿ 18 ಮಂದಿ ಸಾವು

PC : thehindu.com
ಅಬುಜಾ: ದಕ್ಷಿಣ ನೈಜೀರಿಯಾದಲ್ಲಿ ಗ್ಯಾಸೊಲಿನ್ ಟ್ಯಾಂಕರ್ ಸ್ಫೋಟದಲ್ಲಿ ಕನಿಷ್ಟ 18 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಆಗ್ನೇಯದ ಎನುಗು ರಾಜ್ಯದಲ್ಲಿ ಎನುಗು- ಒನಿತ್ಶಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗ್ಯಾಸೊಲಿನ್ ತುಂಬಿದ್ದ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು 17 ವಾಹನಗಳಿಗೆ ಅಪ್ಪಳಿಸಿದ ಬಳಿಕ ಟ್ಯಾಂಕರ್ ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಿಸಿದೆ. ಮೃತಪಟ್ಟವರು ಗುರುತಿಸಲಾಗದಷ್ಟು ಕರಕಲಾಗಿ ಹೋಗಿದ್ದರು. 10 ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಇತರ ಮೂವರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ ಎಂದು ಅಗ್ನಿಶಾಮಕ ದಳದ ವಕ್ತಾರರು ಹೇಳಿದ್ದಾರೆ.
Next Story





