ನೈಜೀರಿಯಾ: ರಸ್ತೆ ಅಪಘಾತದಲ್ಲಿ 21 ಕ್ರೀಡಾಪಟುಗಳ ಸಾವು

ಸಾಂದರ್ಭಿಕ ಚಿತ್ರ - AI
ಅಬುಜಾ: ನೈಜೀರಿಯಾದ ಹೆದ್ದಾರಿಯಲ್ಲಿ ರವಿವಾರ ಬಸ್ಸೊಂದು ಮಗುಚಿಬಿದ್ದು ರಾಷ್ಟ್ರೀಯ ಕ್ರೀಡಾಕೂಟದಿಂದ ಹಿಂದಿರುಗುತ್ತಿದ್ದ 21 ಕ್ರೀಡಾಪಟುಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಒಗುನ್ ರಾಜ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳು ಉತ್ತರ ನೈಜೀರಿಯಾದ ಕಾನೊ ನಗರಕ್ಕೆ ಹಿಂದಿರುಗುತ್ತಿದ್ದರು. ದೀರ್ಘ ಪ್ರಯಾಣವಾದ್ದರಿಂದ ಚಾಲಕ ದಣಿದಿರಬಹುದು ಅಥವಾ ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





