Nigeria | ಸಶಸ್ತ್ರ ಗುಂಪಿನಿಂದ ಕನಿಷ್ಠ 20 ಜನರ ಹತ್ಯೆ

Photo Credit : AP
ಅಬುಜಾ, ಜೂ.23: ನೈಜೀರಿಯಾದ ಉತ್ತರ-ಮಧ್ಯ ಪ್ರಾಂತದಲ್ಲಿರುವ ಸಮುದಾಯವೊಂದರ ಮೇಲೆ ಸಶಸ್ತ್ರ ಗುಂಪೊಂದು ದಾಳಿ ನಡೆಸಿ, ಕನಿಷ್ಠ 20 ಜನರನ್ನು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ಲೇಟೋ ರಾಜ್ಯದ ಬೊಕ್ಕೊಸ್ ಪ್ರಾಂತದಲ್ಲಿರುವ ಕಾವೆಲ್ ಸಮುದಾಯದ ಮೇಲೆ ರವಿವಾರ ತಡರಾತ್ರಿ ದಾಳಿ ನಡೆದಿದ್ದು, ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ. ಇತರ ಹಲವರು ಗಾಯಗೊಂಡಿದ್ದಾರೆ.
ಮಾಹಿತಿ ತಿಳಿಯುತ್ತಲೇ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ದಾಳಿಕೋರರೊಂದಿಗೆ ಗುಂಡಿನ ಚಕಮಕಿ ನಡೆಸಿದರು. ಇದರಿಂದಾಗಿ ದಾಳಿಕೋರರು ಅಲ್ಲಿಂದ ಹಿಮ್ಮೆಟ್ಟಬೇಕಾಯಿತು.
ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣವೇ ವಹಿಸಿಕೊಂಡಿಲ್ಲ ಎಂದು ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story




