ಯುದ್ಧ ಕೊನೆಗೊಳ್ಳದೆ ಹಾನಿಗೊಳಗಾದ ಪರಮಾಣು ತಾಣಗಳ ತಪಾಸಣೆಗೆ ಅವಕಾಶವಿಲ್ಲ: ಇರಾನ್

Photo Credit : X
ಟೆಹರಾನ್: ಮಧ್ಯಪ್ರಾಚ್ಯ ಯುದ್ಧವು ಅಂತ್ಯಗೊಳ್ಳುವವರೆಗೆ ಮತ್ತು ಅಮೆರಿಕವು ತನ್ನ ಷರತ್ತುಗಳನ್ನು ಪೂರೈಸುವವರೆಗೆ, ಹಾನಿಗೊಳಗಾದ ತನ್ನ ಪರಮಾಣು ಸೌಲಭ್ಯಗಳಿಗೆ ಭೇಟಿ ನೀಡಲು ವಿಶ್ವಸಂಸ್ಥೆಯ ತಪಾಸಕರಿಗೆ ಅವಕಾಶ ನೀಡುವುದಿಲ್ಲ ಎಂದು ಇರಾನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಇಸ್ರೇಲ್ನೊಂದಿಗಿನ 12 ದಿನಗಳ ಯುದ್ಧದ ಸಮಯದಲ್ಲಿ ಅಮೆರಿಕವೂ ಇರಾನ್ನ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿತ್ತು. ಅಂದಿನಿಂದ ಸ್ಥಗಿತಗೊಂಡಿರುವ ತಪಾಸಣೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಂತರ್ರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ಟೆಹ್ರಾನ್ಗೆ ಒತ್ತಾಯಿಸಿದ ಕೆಲವೇ ದಿನಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ʼಇರಾನ್ನ ಷರತ್ತುಗಳನ್ನು ಪೂರೈಸುವವರೆಗೆ ಮತ್ತು ಯುದ್ಧವು ಶಾಶ್ವತವಾಗಿ ಅಂತ್ಯಗೊಳ್ಳುವವರೆಗೆ ನಾವು ಐಎಇಎಗೆ ಸೌಲಭ್ಯಗಳ ಪ್ರವೇಶವನ್ನು ನೀಡುವುದಿಲ್ಲ. ಐಎಇಎ ಮಾಡಿರುವ ವಿನಂತಿಯು ಬಹುಶಃ ಅಮೆರಿಕದ ಶಸ್ತ್ರಾಸ್ತ್ರಗಳ ಪರಿಣಾಮಕಾರಿತ್ವವನ್ನು ನಿರ್ಣಯಿಸುವ ಗುರಿಯನ್ನು ಹೊಂದಿದೆ ' ಎಂದು ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಹೇಳಿದ್ದಾರೆ.
ಐಎಇಎ ತಪಾಸಕರು ಸೆಪ್ಟೆಂಬರ್ನಲ್ಲಿ ಇರಾನ್ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದರಾದರೂ, ಬಾಂಬ್ ದಾಳಿಗೊಳಗಾದ ನಟಾಂಜ್, ಫೋರ್ಡೋ ಮತ್ತು ಇಸ್ಫಹಾನ್ ಸೇರಿದಂತೆ ಇತರ ತಾಣಗಳಿಗೆ ಅವರಿಗೆ ಪ್ರವೇಶ ಸಿಕ್ಕಿಲ್ಲ.






