ಇರಾನ್ ಮೇಲೆ ಇಂದು ದಾಳಿ ನಡೆಸುವುದಿಲ್ಲ: ಟ್ರಂಪ್ ಸ್ಪಷ್ಟನೆ

ಡೊನಾಲ್ಡ್ ಟ್ರಂಪ್ | Photo Credit : NDTV
ವಾಷಿಂಗ್ಟನ್ : ಇರಾನ್ ಮೇಲೆ ಇಂದು ಯಾವುದೇ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಿಚಿಗನ್ಗೆ ತೆರಳಲು ಶ್ವೇತಭವನದಿಂದ ಹೊರಡುವ ವೇಳೆ ಸುದ್ದಿಗಾರರು, ಅಮೆರಿಕದ ದಾಳಿಗಳು ಇಂದೇ ಪುನರಾರಂಭಗೊಳ್ಳುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ‘ನಾನು ನಿಮಗೆ ಆ ವಿಷಯವನ್ನು ಹೇಳುತ್ತೇನೆಯೇ?’ ಎಂದು ಮರುಪ್ರಶ್ನಿಸಿದರು. ಬಳಿಕ, ‘ಇಲ್ಲ ಎಂಬುದೇ ಉತ್ತರ. ಇಂದು ಯಾವುದೇ ದಾಳಿ ನಡೆಯುವುದಿಲ್ಲ’ ಎಂದು ಹೇಳಿದರು.
ಈ ಹಿಂದೆ, ಶನಿವಾರ ಅಮೆರಿಕದ ಅಧ್ಯಕ್ಷ ಟ್ರಂಪ್, ವಾರಾಂತ್ಯದಲ್ಲಿ ಇರಾನ್ ಮೇಲೆ ಮತ್ತೆ ದಾಳಿ ಅಥವಾ ಒಪ್ಪಂದಕ್ಕೆ ಬರುವ ಬಗ್ಗೆ ಹೇಳಿಕೆ ನೀಡಿದ್ದರು.
Next Story




