ಅಮೆರಿಕದೊಂದಿಗೆ ಯಾವುದೇ ಒಪ್ಪಂದ ಅಂತಿಮಗೊಂಡಿಲ್ಲ : ಇರಾನ್ ಸ್ಪಷ್ಟನೆ

Photo Credit : PTI
ಟೆಹ್ರಾನ್: ಅಮೆರಿಕದೊಂದಿಗೆ ಯಾವುದೇ ಒಪ್ಪಂದವು ಇನ್ನೂ “ಅಂತಿಮಗೊಂಡಿಲ್ಲ” ಎಂದು ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಸ್ಪಷ್ಟಪಡಿಸಿದ್ದಾರೆ.
“ಪರಮಾಣು ವಿಷಯ ಸೇರಿದಂತೆ ಇತರ ಕೆಲವು ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಈ ಹಂತದಲ್ಲಿ ನಮ್ಮ ಪ್ರಮುಖ ಗಮನ ಯುದ್ಧವನ್ನು ಕೊನೆಗೊಳಿಸುವುದರ ಮೇಲಿದೆ. ಪರಮಾಣು ಯೋಜನೆಯ ವಿವರಗಳ ಬಗ್ಗೆ ನಾವು ಈಗ ಚರ್ಚಿಸುತ್ತಿಲ್ಲ” ಎಂದು ಇಸ್ಮಾಯಿಲ್ ಬಘೈ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ನೊಂದಿಗೆ ಯುದ್ಧ ಅಂತ್ಯಗೊಳಿಸುವ ಒಪ್ಪಂದದ ಕುರಿತು ಶೀಘ್ರದಲ್ಲೇ “ಅಂತಿಮ ನಿರ್ಧಾರ” ಕೈಗೊಳ್ಳುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೆ ಇಸ್ಮಾಯಿಲ್ ಬಘೈ ಅವರು ಹೇಳಿಕೆಯನ್ನು ನೀಡಿದ್ದಾರೆ.
Next Story




