ಶಾಂತಿ ಒಪ್ಪಂದ ವಿಸ್ತರಣೆ ಇಲ್ಲ, ಹಾರ್ಮುಝ್ನಲ್ಲಿ ಸೇನಾ ಕಾರ್ಯಾಚರಣೆಗೆ ಸಿದ್ಧ : ಇರಾನ್

Photo Credit : AP
ಟೆಹರಾನ್,ಜೂ.24: ಇರಾನ್ ಜೊತೆಗಿ 60 ದಿನಗಳ ಮಧ್ಯಂತರ ಶಾಂತಿ ಒಪ್ಪಂದ ಮುಕ್ತಾಯಗೊಂಡಿರುವುದರಿಂದ ಜಲಸಂಧಿಯಲ್ಲಿ ಸೇನಾ ಕಾರ್ಯಾಚರಣೆ ಉಲ್ಬಣಿಸಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಒಂದು ವೇಳೆ ರಾಜತಾಂತ್ರಿಕ ಪ್ರಯತ್ನಗಳು ವಿಫಲಗೊಂಡಲ್ಲಿ ಅಮೆರಿಕದ ನಿರ್ಬಂಧಗಳನ್ನು ಮೀರಲು ಇರಾನ್ ನಿಖರ ಹಾಗೂ ಸಕಾಲಿಕ ದಾಳಿಗಳನ್ನು ನಡೆಸುವುದಾಗಿ ಇರಾನ್ನ ಹಿರಿಯ ಅಧಿಕಾರಿಯೊಬ್ಬರು ರಾಯ್ಟರ್ಸ್ಗೆ ತಿಳಿಸಿದ್ದಾರೆ. ಮಧ್ಯಂತರ ಶಾಂತಿ ಒಪ್ಪಂದವನ್ನು ವಿಸ್ತರಿಸುವ ಸಾಧ್ಯತೆಯನ್ನು ಇರಾನ್ ಹಾಗೂ ಅಮೆರಿಕ ತಳ್ಳಿಹಾಕಿದ ಬೆನ್ನಲ್ಲೇ ಇರಾನ್ ಈ ಎಚ್ಚರಿಕೆಯನ್ನು ನೀಡಿದೆ.
ಈ ಮಧ್ಯೆ ಇರಾನ್ ಹೇಳಿಕೆಯೊಂದನ್ನು ನೀಡಿ, ಹಾರ್ಮುಝ್ ಜಲಸಂಧಿ ಮೂಲಕ ಹಡಗುಗಳ ಸಂಚಾರವನ್ನು ನಿಯಂತ್ರಿಸುವ ಯೋಜನೆಗೆ ಸಂಬಂಧಿಸಿ ಇರಾನ್ ಜೊತೆಗೆ ಒಪ್ಪಂದಕ್ಕೆ ಬಂದಿರುವುದಾಗಿ ಇರಾನ್ ಘೋಷಿಸಿದೆ. ಒಪ್ಪಂದದ ಕುರಿತ ವಿವರಗಳನ್ನು ಒಳಗೊಂಡಿರುವ ಜಂಟಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಲು ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಹೇಳಿದರು. ಇರಾನ್ನ ವಿದೇಶಾಂಗ ಸಚಿವ ಇಸ್ಮಾಯಿ ಬಾಖಾಯಿ ಅವರು ಈ ವಿಷಯವನ್ನು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಹಾರ್ಮುಝ್ ಜಲಸಂಧಿಯನ್ನು ವಾಣಿಜ್ಯ ಹಡಗುಗಾರಿಕೆಗೆ ಸಂಪೂರ್ಣವಾಗಿ ತೆರೆದಿಡಬೇಕೆಂಬುದು ಅಮೆರಿಕದ ಮುಖ್ಯ ಬೇಡಿಕೆಗಳಲ್ಲಿ ಒಂದಾಗಿದೆ. ಆದಾಗ್ಯೂ ಇರಾನ್- ಒಮಾನ್ ಒಪ್ಪಂದವು ಅಮೆರಿಕದ ಶರತ್ತುಗಳಿಗೆ ಅನುಗುಣವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆದರೆ ವೇಳೆ ಇರಾನ್ ವಿರುದ್ಧ ವಿಧಿಸಲಾಗಿರುವ ನೌಕಾಯಾನ ದಿಗ್ಬಂಧನಕ್ಕೆ ಪ್ರತಿರೋಧವನ್ನು ತೋರಿದಲ್ಲಿ ಒಮಾನ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ಬೆದರಿಕೆಯೊಡ್ಡಿದೆ.
ಅಮೆರಿಕದಿಂದ ನಿರಂತರವಾಗಿ ಶಾಂತಿ ಒಪ್ಪಂದ ಉಲ್ಲಂಘನೆ: ಇರಾನ್
ಅಮೆರಿಕವು ಆರಂಭದಿಂದಲೇ ಶಾಂತಿ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಬಂದಿರುವುದರಿಂದ ಒಪ್ಪಂದಕ್ಕೆ ಗಡುವು ವಿಧಿಸಿರುವುದು ಅರ್ಥಹೀನವೆಂದು ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಾಘೇಯಿ ತಿಳಿಸಿದ್ದಾರೆ.‘‘ ನಾವು ಮಾತುಕತೆಗಳನ್ನು ಆರಂಭಿಸಿಲ್ಲ. ಆರಂಭದಿಂದಲೇ ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಾ ಬಂದಿದ್ದೇವೆ. ಹೀಗಾಗಿ 60 ದಿನಗಳ ಗಡುವು ಮುಕ್ತಾಯಗೊಂಡಿರುವುದು ಅಪ್ರಸ್ತುತ’’ ಎಂದು ಅವರು ಹೇಳಿದ್ದಾರೆ.






