ಹೌದಿಗಳೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ: ಅಮೆರಿಕ ಸ್ಪಷ್ಟನೆ

Photo Credit : X
ವಾಶಿಂಗ್ಟನ್: ಹೌದಿ ಗುಂಪಿನೊಂದಿಗೆ ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ ಮತ್ತು ಹೌದಿ ಸಶಸ್ತ್ರ ಪಡೆಯನ್ನು ಎದುರಿಸುವಲ್ಲಿ ಯಮನ್ನ ಕಾನೂನುಬದ್ಧ ಸರಕಾರವನ್ನು ಬೆಂಬಲಿಸುವುದಾಗಿ ತಿಳಿಸಿದೆ.
ಹೌದಿಗಳು ತಾವು ವಶಪಡಿಸಿಕೊಂಡ ಭೂಪ್ರದೇಶದಿಂದ ಹಿಂತೆಗೆದುಕೊಳ್ಳಬೇಕು ಮತ್ತು ದಾಳಿಗಳನ್ನು ನಿಲ್ಲಿಸಬೇಕು ಎಂದು ಮಂಗಳವಾರ ಬಾಬ್ ಅಲ್-ಮಂದೇಬ್ ಕುರಿತು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಅಮೆರಿಕ ಆಗ್ರಹಿಸಿದೆ.
ಬಾಬ್ ಅಲ್-ಮಂದೇಬ್ ಜಲಸಂಧಿಯ ಬಳಿಯಿರುವ ಯಮನ್ನ ಪಶ್ಚಿಮ ಕರಾವಳಿಯಲ್ಲಿ ವಾರಗಳ ಕಾಲ ನಡೆದ ಸಂಘರ್ಷದ ನಂತರ ಹೌದಿಗಳು ಮುನ್ನಡೆ ಸಾಧಿಸಿದ್ದರು. ಈ ಮುನ್ನಡೆಯನ್ನು ಬಲಪಡಿಸಿಕೊಳ್ಳುವ ಪ್ರಯತ್ನವಾಗಿ, ತಾವು ಅಮೆರಿಕದ ಹಡಗುಗಳನ್ನು ಗುರಿಯಾಗಿಸುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಲು ಹೌದಿಗಳು ಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story




