ಬಹುಮಾನಗಳನ್ನು ಸಾಂಕೇತಿಕವಾಗಿ ವರ್ಗಾಯಿಸಲು ಸಾಧ್ಯವಿಲ್ಲ: ಟ್ರಂಪ್ಗೆ ಶಾಂತಿ ಪ್ರಶಸ್ತಿ ಹಸ್ತಾಂತರ ತಿರಸ್ಕರಿಸಿದ ನೊಬೆಲ್ ಪ್ರತಿಷ್ಠಾನ

Image Credit: X/@WhiteHouse
ಓಸ್ಲೊ, ಜ.18: ತನ್ನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ಗೆ ಹಸ್ತಾಂತರಿಸಿರುವುದಾಗಿ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಮಚಾದೊ ನೀಡಿರುವುದನ್ನು ತಿರಸ್ಕರಿಸುವುದಾಗಿ ನೊಬೆಲ್ ಪ್ರತಿಷ್ಠಾನ ರವಿವಾರ ಹೇಳಿದೆ.
ಪ್ರಶಸ್ತಿಗಳ ಘನತೆಯನ್ನು ಮತ್ತು ಆಲ್ಫ್ರೆಡ್ ನೊಬೆಲ್ ಅವರ ಆಶಯಗಳ ನಿಬಂಧನೆಗಳನ್ನು ಎತ್ತಿಹಿಡಿಯುವುದು ತನ್ನ ಮುಖ್ಯ ಆದ್ಯತೆಗಳಲ್ಲಿ ಒಂದಾಗಿದೆ ಎಂದು ನೊಬೆಲ್ ಪ್ರತಿಷ್ಠಾನ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಬಹುಮಾನಗಳನ್ನು ಮನುಕುಲಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಿದವರಿಗೆ ಮಾತ್ರ ನೀಡಲಾಗುತ್ತದೆ ಮತ್ತು ಅವುಗಳನ್ನು ಸ್ವೀಕರಿಸುವ ಹಕ್ಕು ಯಾರಿಗೆ ಇದೆ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದ್ದರಿಂದ ಬಹುಮಾನಗಳನ್ನು ಸಾಂಕೇತಿಕವಾಗಿ ವರ್ಗಾಯಿಸಲು ಸಾಧ್ಯವಿಲ್ಲ' ಎಂದು ನೊಬೆಲ್ ಪ್ರತಿಷ್ಠಾನ ಹೇಳಿದೆ.
Next Story





