ಡೊನಾಲ್ಡ್ ಟ್ರಂಪ್ ಗೆ 'ಪೇಪರ್' ನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ!

Photo Credit : X
ಹೊಸದಿಲ್ಲಿ: ಈ ಬಾರಿಯ ನೊಬೆಲ್ ಶಾಂತಿಪ್ರಶಸ್ತಿ ವೆನಿಜುವೆಲಾದ ಮರಿಯಾ ಕೊರಿನಾ ಮಚಾದೊ ಅವರಿಗೆ ಲಭಿಸಿದೆ. ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ, ಸಾಕಷ್ಟು ಬಾರಿ ಬಹಿರಂಗವಾಗಿಯೇ ಲಾಬಿ ಮಾಡಿದ್ದ, ಡೊನಾಲ್ಡ್ ಟ್ರಂಪ್ ಅವರಿಗೆ ನಿರಾಸೆಯಾಗಿದೆ.
ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯು ಬೆನ್ನಲ್ಲೇ ಅಮೆರಿಕದ ಶ್ವೇತ ಭವನವು ಶಾಂತಿ ಪ್ರಶಸ್ತಿಯಲ್ಲಿ ರಾಜಕೀಯ ನಡೆದಿದೆ ಎಂದು ಕಿಡಿ ಕಾರಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಜನರು 'ಹೈಪರ್ ಆಕ್ಟಿವ್' ಆಗಿದ್ದು, ಡೊನಾಲ್ಡ್ ಟ್ರಂಪ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿನ ಬಳಕೆದಾರರೊಬ್ಬರು, ಡೊನಾಲ್ಡ್ ಟ್ರಂಪ್ ಅವರು ಕಾಗದದ ಮೇಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಟ್ರೋಲ್ ಮಾಡಿದ್ದಾರೆ. ಅಲ್ಲದೇ 'ಪ್ರಶಸ್ತಿ ಪತ್ರ'ವನ್ನೂ ಅದಕ್ಕೆ ಲಗತ್ತಿಸಿದ್ದಾರೆ.
ಇನ್ನೊಬ್ಬರು ಖಾಪ್ ನೊಬೆಲ್ ಪ್ರಶಸ್ತಿ ಎಂದು ಮೀಮ್ ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ. ಪೋಸ್ಟ್ ಅನ್ನು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ ಆ ರಾತ್ರಿ ನಾನು ರಾತ್ರಿ ಎರಡು ಗಂಟೆಯವರೆಗೆ ಕುಡಿದೆ ಎಂದು ಡೊನಾಲ್ಡ್ ಟ್ರಂಪ್ ಅವರನ್ನು ತಮಾಷೆ ಮಾಡಿದ್ದಾರೆ.
ಮತ್ತೊಬ್ಬರಂತೂ ಒಂದು ಹೆಜ್ಜೆ ಮುಂದೆ ಹೋಗಿ, "ನೊಬೆಲ್ ಸಮಿತಿಯ ಮೇಲೆ ಬಾಂಬ್ ಹಾಕಿ ಮತ್ತು ಬೇರೆ ಯಾವುದೂ ಕೆಲಸ ಮಾಡದಿದ್ದರೂ ಪರವಾಗಿಲ್ಲ ಪ್ರಶಸ್ತಿಯನ್ನು ಕದಿಯಿರಿ!", ಎಂದು ಟ್ರಂಪ್ ಯುದ್ಧ ಕಾರ್ಯದರ್ಶಿಗೆ ಆದೇಶ ನೀಡುತ್ತಾರೆಯೇ!? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.







