ಉತ್ತರ ಕೊರಿಯಾ | ಯುದ್ಧ ನೌಕೆ ಧ್ವಂಸ ಕ್ಷಿಪಣಿ ಉಡಾವಣೆ ವಿಫಲ: ನಾಲ್ವರು ಅಧಿಕಾರಿಗಳನ್ನು ಬಂಧಿಸಿದ ಕಿಮ್ ಜಾಂಗ್ ಉನ್ ಸರಕಾರ

PC : thehindu.com
ಸಿಯೋಲ್: ಯುದ್ಧ ನೌಕೆ ಧ್ವಂಸ ಕ್ಷಿಪಣಿ ಉಡಾವಣೆ ವಿಫಲವಾದ ಕಾರಣಕ್ಕೆ ಉತ್ತರ ಕೊರಿಯಾ ಸರಕಾರ ನಾಲ್ವರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದು, ಈ ಕ್ಷಿಪಣಿಯು ಉತ್ತರ ಕೊರಿಯಾ ಬಹಿರಂಗಗೊಳಿಸಿರುವುದಕ್ಕಿಂತ ಹೆಚ್ಚು ಹಾನಿಗೀಡಾಗಿದೆ ಎಂದು ವಿದೇಶಿ ವೀಕ್ಷಕರು ಹೇಳಿದ್ದಾರೆ.
ಬುಧವಾರ (ಮೇ 21, 2025) ನಡೆದ ಈ ಯುದ್ಧ ನೌಕೆ ಧ್ವಂಸ ಕ್ಷಿಪಣಿಯ ಉಡಾವಣೆ ವಿಫಲಗೊಳ್ಳಲು ಕ್ರಿಮಿನಲ್ ನಿರ್ಲಕ್ಷ್ಯ ಕಾರಣ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೇ, ಈ ಬಂಧನ ನಡೆದಿದೆ. ಈ ವೈಫಲ್ಯಕ್ಕೆ ಕಾರಣರಾಗಿರುವವರನ್ನು ಈ ಕ್ಷಮಿಸಲಸಾಧ್ಯವಾದ ಕ್ರಿಮಿನಲ್ ಕೃತ್ಯಕ್ಕೆ ಉತ್ತರದಾಯಿಗಳನ್ನಾಗಿಸಲಾಗುವುದು ಎಂದು ಶುಕ್ರವಾರ ಪ್ರಧಾನ ಸೇನಾ ಸಮಿತಿ ಹೇಳಿದೆ.
ವಿಫಲಗೊಂಡ ಈ ಕ್ಷಿಪಣಿಯ ಪಕ್ಕದಲ್ಲಿ ಯುದ್ಧ ನೌಕೆಯು ಕೆಲ ಭಾಗಗಳು ಮುಳುಗಿರುವ ಸ್ಥಿತಿಯಲ್ಲಿರುವುದು ಹಾಗೂ ಅದರ ಮೇಲೆ ನೀಲಿ ಬಣ್ಣದ ಹೊದಿಕೆ ಹೊರಿಸಿರುವುದು ಉಪಗ್ರಹ ಚಿತ್ರಗಳಲ್ಲಿ ಸೆರೆಯಾಗಿದೆ. ಈ ಯುದ್ಧ ನೌಕೆಗಾಗಿರುವ ಹಾನಿಯನ್ನು ದುರಸ್ತಿಗೊಳಿಸಲು ಸುಮಾರು 10 ದಿನಗಳ ಅವಧಿ ತಗುಲಲಿದೆ ಎಂದು ಉತ್ತರ ಕೊರಿಯಾ ಹೇಳಿದ್ದರೂ, ಈ ಹಾನಿಯ ಪ್ರಮಾಣ ಇನ್ನೂ ಅಧಿಕವಾಗಿದೆ ಎಂದು ಶಂಕಿಸಿರುವ ವಿದೇಶಿ ವೀಕ್ಷಕರು, ಉತ್ತರ ಕೊರಿಯಾ ಹೇಳಿರುವ ಕಾಲಾವಧಿಯ ಕುರಿತು ಪ್ರಶ್ನೆಯೆತ್ತಿದ್ದಾರೆ.
ಆದರೆ, ಶುಕ್ರವಾರ ಈ ಕುರಿತು ವರದಿ ಮಾಡಿರುವ ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ Korean Central News, ಪ್ರಾಥಮಿಕ ಮೌಲ್ಯಮಾಪನದ ವೇಳೆಯೇ ಕ್ಷಿಪಣಿಯ ಕವಚದ ತಳದಲ್ಲಿ ರಂಧ್ರಗಳು ಕಂಡು ಬಂದಿದ್ದುದರಿಂದ, 5000 ಟನ್ ತೂಕದ ಈ ಕ್ಷಿಪಣಿಗೆ ಆಗಿರುವ ಹಾನಿಯ ತೀವ್ರತೆ ಅಷ್ಟು ಗಂಭೀರವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.







